ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಲಸಿಕೆಯನ್ನು ಮಿಶ್ರಣ ಮಾಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ. ದೇಶದಲ್ಲಿ 5ರಿಂದ 18 ವರ್ಷದ ಮಕ್ಕಳಿಗೆ ಮಾತ್ರ ನೀಡಲಾಗುತ್ತಿದ್ದ ಕೋರ್ಬೆವ್ಯಾಕ್ಸ್ ಲಸಿಕೆಯನ್ನು ಇನ್ನು ಮುಂದೆ ಯಾವುದೇ ಲಸಿಕೆ ಪಡೆದ ವಯಸ್ಕರಿಗೂ ಬೂಸ್ಟರ್ ಡೋಸ್ ಆಗಿ ನೀಡಲು ಡಿಸಿಜಿಐ ಒಪ್ಪಿಗೆ ನೀಡಿದೆ.
ಮೊದಲೆರಡು ಡೋಸ್ಗಳನ್ನು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಪಡೆದಿದ್ದರೂ 3ನೇ ಡೋಸ್ ಕೋರ್ಬೆವ್ಯಾಕ್ಸ್ ನೀಡಬಹುದು ಎಂದು ಡಿಸಿಜಿಐ ತಿಳಿಸಿದೆ. ಈವರೆಗೆ ಬೂಸ್ಟರ್ ಡೋಸ್ (3ನೇ ಡೋಸ್) ಆಗಿ ಮೊದಲೆರಡು ಡೋಸ್ ಪಡೆದ ಲಸಿಕೆಯನ್ನೇ ಪಡೆಯುವ ನಿಯಮವಿತ್ತು. ಇದೀಗ ಈ ನಿಯಮಕ್ಕೆ ಬ್ರೇಕ್ ಬಿದ್ದಿದೆ.
ಕೋರ್ಬೆವ್ಯಾಕ್ಸ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಪಡೆಯಲು ಮೊದಲೆರಡು ಡೋಸ್ ಪಡೆದು ಆರು ತಿಂಗಳು ಆಗಿರಬೇಕು ಎಂದು ಡಿಸಿಜಿಐ ಹೇಳಿಕೆಯಲ್ಲಿ ತಿಳಿಸಿದೆ.