ಪಠ್ಯ ಪುಸ್ತಕ ಪುಂಡ ಪೋಕರಿಗಳು ತಲೆ ಹರಟೆ ಮಾಡುವ ತಾಣವಲ್ಲ: ಡಾ.ಎಚ್.ಸಿ.ಮಹದೇವಪ್ಪ

Prasthutha|

ಬೆಂಗಳೂರು: ಪಠ್ಯ ಪುಸ್ತಕ ಎಂಬುದು ಪ್ರಜಾಪ್ರಭುತ್ವವನ್ನು ಆರೋಗ್ಯಕರವಾಗಿ ಬೆಳೆಸುವ ಆಕರವೇ ಹೊರತು ಪುಂಡ ಪೋಕರಿಗಳು ತಲೆ ಹರಟೆ ಮಾಡುವ ತಾಣವಲ್ಲ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪಠ್ಯ ಪುಸ್ತಕ ಎಂಬುದು ಪ್ರಜಾಪ್ರಭುತ್ವವನ್ನು ಆರೋಗ್ಯಕರವಾಗಿ ಬೆಳೆಸುವ ಆಕರವೇ ಹೊರತು ಪುಂಡ ಪೋಕರಿಗಳು ತಲೆ ಹರಟೆ ಮಾಡುವ ತಾಣವಲ್ಲ. ಸರ್ಕಾರ ಕೂಡಲೇ ರೋಹಿತ್ ಚಕ್ರತೀರ್ಥ ಸಮಿತಿಯನ್ನು ರದ್ದು ಮಾಡಿ. ಆತನ ಸಮಿತಿ ಮಾಡಿರುವ ಅಜ್ಞಾನದ ಯಡವಟ್ಟುಗಳನ್ನೂ ಕೂಡಾ ರದ್ದು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.



Join Whatsapp