ಚಿಕ್ಕಮಗಳೂರು| ಆನೆದಂತಗಳ ಸಹಿತ ಆರೋಪಿಗಳ ಸೆರೆ

Prasthutha|

ಚಿಕ್ಕಮಗಳೂರು: ಅಡಗಿಸಿಟ್ಟಿದ್ದ ಎರಡು ಆನೆದಂತಗಳನ್ನು ವಶಪಡಿಸಿಕೊಂಡು, ಐವರು ಆರೋಪಿಗಳನ್ನು ಬಂಧಿಸಿದ ಘಟನೆ ನಗರದ ಹೊರವಲಯದ ಅಲ್ಲಂಪುರ ಬಳಿ ನಡೆದಿದೆ.

- Advertisement -

ಆರೋಪಿಗಳ ಚಟುವಟಿಕೆಗಳ ಮಾಹಿತಿ ಕಲೆ ಹಾಕಿ, ಕಾರ್ಯಾಚರಣೆ ನಡೆಸಿದ ಅರಣ್ಯ ಸಂಚಾರ ದಳದ ಪೊಲೀಸರು ಸುಮಾರು 15 ಕೆ.ಜಿ ತೂಕದ ಎರಡು ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಳ್ಳಲಾದ ಆನೆದಂತಗಳ ಸಹಿತ  ಆರೋಪಿಗಳನ್ನುಕೋರ್ಟ್‌ಗೆ ಹಾಜರುಪಡಿಸಲಾಗುವುದು  ಎಂದು ಅರಣ್ಯ ಸಂಚಾರ ದಳದ ಪೊಲೀಸ್  ಅಧಿಕಾರಿಯೊಬ್ಬರು ತಿಳಿಸಿದರು.

Join Whatsapp