ಬೆಂಗಳೂರು: ಉತ್ತರ ವಿಶ್ವವಿದ್ಯಾಲಯದ ಬಿಕಾಂ ಹಾಗೂ ಬಿಸಿಎ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಸೋಮವಾರ ಬೆಳಗ್ಗೆ ನಡೆಬೇಕಿದ್ದಂತಹ ಬಿಕಾಂನ ಪ್ರಿನ್ಸಿಪಲ್ಸ್ ಆಫ್ ಮಾರ್ಕೆಟಿಂಗ್ ಹಾಗೂ ಬಿಸಿಎ ಪದವಿಯ ಮ್ಯಾಥಮೇಟಿಕಲ್ ಫೌಂಡೇಷನ್ ವಿಷಯ ಪ್ರಶ್ನೆ ಪತ್ರಿಕೆಗಳು ಸೋಮವಾರ ಬೆಳಗ್ಗೆ 7-8 ಗಂಟೆ ಸುಮಾರಿಗೆ ವಾಟ್ಸ್ಆಪ್ಗಳಲ್ಲಿ ಹರಿದಾಡಿದ್ದು, ಇದರಿಂದ ಎಚ್ಚೆತ್ತು ವಿವಿಯು ಕೂಡಲೇ ಪರೀಕ್ಷೆಯನ್ನು ಮುಂದೂಡಿದೆ.
ಪ್ರಸಕ್ತ ವರ್ಷದಲ್ಲಿ ನಡೆಯುತ್ತಿರುವ ಪದವಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಪದೇ ಪದೆ ಸೋರಿಕೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ವಿವಿಯ ಆಡಳಿಯ ಸೋರಿಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿಬಂದಿವೆ.