ಅತ್ತೆಯ ಕಿರುಕುಳವನ್ನೇ ಸ್ಫೂರ್ತಿಯಾಗಿ ತೆಗೆದು UPSC ಪಾಸ್ ಮಾಡಿದ ಸೊಸೆ

Prasthutha|

ಹಾಪುರ್: ಉತ್ತರ ಪ್ರದೇಶದ ಹಾಪುರ್ ದಲ್ಲಿ ಏಳು ವರ್ಷದ ಮಗುವಿನ ತಾಯಿಯೊಬ್ಬಳು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದು, ಇತರ ಹೆಣ್ಣು ಮಕ್ಕಳಿಗೂ ಮಾದರಿಯಾಗಿದ್ದಾರೆ. ಈ ಸಾಧಕಿಗೆ ಅತ್ತೆಯ ಕಿರುಕುಳವೇ ಸ್ಫೂರ್ತಿಯಾಗಿದ್ದು ವಿಶೇಷವಾಗಿದೆ.
ಶಿವಾಂಗಿ ಗೋಯಲ್ ಗಂಡನ ಮನೆಯಲ್ಲಿ ಅತ್ತೆ ನೀಡುತ್ತಿದ್ದ ಕಿರುಕುಳದಿಂದ ಐಎಎಸ್ ಅಧಿಕಾರಿಯಾಗಬೇಕೆಂಬ ನಿರ್ಧಾರ ಕೈಗೊಂಡು, ಇದೀಗ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 177ನೇ ಸ್ಥಾನ ಪಡೆದುಕೊಂಡಿದ್ದಾರೆ.

- Advertisement -


ಕಳೆದ ಕೆಲ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಶಿವಾಂಗಿಗೆ ಅತ್ತೆ – ಮಾವ ನಿತ್ಯ ಕಿರುಕುಳ ನೀಡಲು ಶುರು ಮಾಡಿದ್ದರು. ಇದರ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಇಷ್ಟಾದರೂ, ಗಂಡನ ಮನೆಯವರ ಕಿರುಕುಳ ನಿಲ್ಲುವುದಿಲ್ಲ.
ಹೀಗಾಗಿ, ಪೋಷಕರ ಮನೆಗೆ ವಾಪಸ್ ಆಗಿ, ತಂದೆ-ತಾಯಿ ಜೊತೆ ಜೀವನ ನಡೆಸಲು ಮುಂದಾಗುತ್ತಾರೆ. ಈ ವೇಳೆ ಶಿವಾಂಗಿ ತಂದೆ, ನೀನು ಏನು ಮಾಡಬೇಕೋ ಅಂದುಕೊಂಡಿದ್ದೀಯಾ ಅದನ್ನು ಮಾಡು ಎಂದು ಕಿವಿಮಾತು ಹೇಳುತ್ತಾರೆ. ಈ ವೇಳೆ ಯುಪಿಎಸ್ಸಿ ಪರೀಕ್ಷೆ ತಯಾರಿ ಮಾಡುವ ನಿರ್ಧಾರ ಕೈಗೊಳ್ಳುತ್ತಾರೆ.


ಮುದವೆಗೂ ಮುನ್ನ ಎರಡು ಸಲ UPSC ಪಾಸ್ ಆಗಲು ಪ್ರಯತ್ನಿಸಿ, ವಿಫಲವಾಗಿದ್ದ ಶಿವಾಂಗಿ, ಮದುವೆ,ಯಾಗಿ ವರ್ಷಗಳ ಬಳಿಕ ಕೌಟುಂಬಿಕ ಸಮಸ್ಯೆಗಳ ನಡುವೆಯೂ ಕೂಡ ತಯಾರಿ ನಡೆಸಿ ಯಶಸ್ವಿಯಾಗಿದ್ದು, 177ನೇ ಸ್ಥಾನ ಪಡೆದುಕೊಂಡಿದ್ದಾರೆ.



Join Whatsapp