ನಾನು 130 ಕೋಟಿ ಭಾರತೀಯರಿಗೂ ಪ್ರಧಾನ ಸೇವಕ: ನರೇಂದ್ರ ಮೋದಿ

Prasthutha|

ಶಿಮ್ಲಾ: ನಾನು 130 ಕೋಟಿ ಭಾರತೀಯರಿಗೂ ಪ್ರಧಾನ ಸೇವಕನಾಗಿರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂಟು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.

- Advertisement -

ನಾನು ನನ್ನನ್ನೂ ಒಮ್ಮೆಯೂ ಪ್ರಧಾನಿಯಾಗಿ ನೋಡಲಿಲ್ಲ, ಪ್ರಧಾನಮಂತ್ರಿಯ ಜವಾಬ್ದಾರಿಯನ್ನು ದಾಖಲೆಗಳಿಗೆ ಸಹಿ ಹಾಕುವಾಗ ಮಾತ್ರ ನಿಭಾಯಿಸುತ್ತೇನೆ ಎಂದರು. 2014ರ ಮೊದಲು ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರವನ್ನು ವ್ಯವಸ್ಥೆಯ ಅವಿಭಾಜ್ಯ ಅಂಗವೆಂದು ಪರಿಗಣಿಸಿತ್ತು. ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದಲು ಅದಕ್ಕೆ ಶರಣಾಗಿತ್ತು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನಮ್ಮ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದೆ. ಆನ್ಲೈನ್ ವಹಿವಾಟು ಮೂಲಕ ಫಲಾನುಭವಿಗಳ ಖಾತೆಗೆ ಹಣ ಸೇರುತ್ತಿದೆ ಎಂದು ಹೇಳಿದರು. ನಮ್ಮ ಸರ್ಕಾರ ಬಡವರಿಗೆ ಬ್ಯಾಂಕ್ ಖಾತೆ ಮಾಡಿಸಿಕೊಟ್ಟಿತ್ತು. ಆಧಾರ್ ಮತ್ತು ಮೊಬೈಲ್ ನಂಬರ್ ಜೋಡಿಸುವ ಮೂಲಕ ತ್ರಿಶಕ್ತಿ ರೂಪಿಸಿ ಭದ್ರತೆ ಹೆಚ್ಚಿಸಿತು. ಉಜ್ವಲ ಯೋಜನೆ ಮೂಲಕ ಸಿಲಿಂಡರ್ ಅನ್ನೂ ನೀಡುತ್ತಿದ್ದೇವೆ ಎಂದು ಮೋದಿ ಹೇಳಿದರು.

Join Whatsapp