ಭುವನೇಶ್ವರ: ತಮ್ಮ ಚರ್ಚ್ ಅನ್ನು ಸೀಲ್ ಮಾಡಿದ ಮತ್ತು ಧಾರ್ಮಿಕ ಮತಾಂತರದ ಆರೋಪ ಹೊರಿಸಿ ಚರ್ಚ್’ನಲ್ಲಿ ಪ್ರಾರ್ಥನೆಗೆ ನಿರ್ಬಂಧ ಹೇರಿದ ಸರ್ಕಾರದ ನಡೆಯನ್ನು ಒರಿಸ್ಸಾದ ಕ್ರಿಶ್ಚಿಯನ್ ಸಮುದಾಯ ಕಟುವಾಗಿ ಟೀಕಿಸಿದೆ.
ಒರಿಸ್ಸಾದ ಭದ್ರಕ್ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೆಲ್ತುವಾ ಗ್ರಾಮದ ಏಕೈಕ ಚರ್ಚ್ ಅನ್ನು ಸ್ಥಳೀಯಾಡಳಿತವು ಸೀಲ್ ಮಾಡಿದ ಬಳಿಕ ನಮ್ಮವರು ಮೇ 17 ರಿಂದ ಚರ್ಚ್ ನಲ್ಲಿ ಪೂಜೆ ನಡೆಸದಂತೆ ನಿರ್ಬಂಧಲಾಗಿದೆ ಎಂದು ಹೈಕೋರ್ಟ್ ಹಿರಿಯ ವಕೀಲರಾದ ಪ್ರತಾಪ್ ಚಿಂಚನಿ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಚರ್ಚ್ ಅನ್ನು ಸೀಲ್ ಮಾಡುವ ನಿರ್ಧಾರವು ಅನ್ಯಾಯವಾಗಿದೆ ಮತ್ತು ಈ ಸಂಬಂಧ ಸ್ಥಳೀಯಾಡಳಿತ ಯಾವುದೇ ಕಾರಣವನ್ನು ಉಲ್ಲೇಖಿಸಿದೇ ಮತ್ತು ನೋಟಿಸ್ ನೀಡದೆ ಮುದ್ರೆ ಹಾಕಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲಾಡಳಿತ ಅಕ್ರಮ ಮತ್ತು ಕಾನೂನುಬಾಹಿರ ನಡೆಯನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗುವುದೆಂದು ಚಿಂಚಣಿ ತಿಳಿಸಿದ್ದಾರೆ.
ಸದ್ಯ ಘಟನೆಯ ಬಗ್ಗೆ ತನಿಖೆ ನಡೆಸಿದ ಬಳಿಕ ಚರ್ಚ್’ಗೆ ಸೀಲ್ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಡು ಜಿಲ್ಲಾಧಿಕಾರಿ ತಿಳಿಸಿದ್ದಾರೆ.