ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ಸಮಿತಿ ರಚನೆ

Prasthutha|

ಡೆಹ್ರಾಡೂನ್ : ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಮತ್ತು ಇತರ ವೈಯಕ್ತಿಕ ಕಾನೂನುಗಳನ್ನು ನಿಯಂತ್ರಿಸುವ ಕಾನೂನುಗಳ ಪರಿಶೀಲನೆ ಸೇರಿದಂತೆ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದ ಮಾರ್ಗಗಳನ್ನು ಪರಿಶೀಲಿಸಲು ಉತ್ತರಾಖಂಡ ಸರ್ಕಾರ  ತಜ್ಞರ ಸಮಿತಿಯನ್ನು ಪ್ರಕಟಿಸಿದೆ.

- Advertisement -

ಪ್ರಸ್ತುತ ಭಾರತದ ಡಿಲಿಮಿಟೇಶನ್ ಆಯೋಗದ ಮುಖ್ಯಸ್ಥರಾಗಿರುವ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಸಮಿತಿಯ ಇತರ ಸದಸ್ಯರಲ್ಲಿ  ದೆಹಲಿ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಪ್ರಮೋದ್ ಕೊಹ್ಲಿ, ಸಾಮಾಜಿಕ ಕಾರ್ಯಕರ್ತ ಮನು ಗೌರ್, ನಿವೃತ್ತ ಐಎಎಸ್ ಅಧಿಕಾರಿ ಶತ್ರುಘ್ನ ಸಿಂಗ್ ಮತ್ತು ಡೂನ್ ವಿಶ್ವವಿದ್ಯಾಲಯದ ಉಪಕುಲಪತಿ ಸುರೇಖಾ ದಂಗ್ವಾಲ್ ಕೂಡ ಸೇರಿದ್ದಾರೆ.

- Advertisement -

ಉತ್ತರಾಖಂಡದಲ್ಲಿ ವಾಸಿಸುವ ಜನರ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಎಲ್ಲಾ ಸಂಬಂಧಿತ ಕಾನೂನುಗಳನ್ನು ಪರಿಶೀಲಿಸಲು ಮತ್ತು ಪ್ರಸ್ತುತ ಕಾನೂನುಗಳಲ್ಲಿ ತಿದ್ದುಪಡಿಗಳ ಕುರಿತು ವರದಿಯನ್ನು ತಯಾರಿಸಲು ತಜ್ಞರ ಸಮಿತಿಯನ್ನು ಸ್ಥಾಪಿಸಲು ರಾಜ್ಯಪಾಲರ ಅನುಮತಿಯಲ್ಲಿ ತಿಳಿಸಲಾಗಿದೆ ಎಂದು ಗೃಹ ಇಲಾಖೆ ಹೊರಡಿಸಿದ ಅಧಿಸೂಚನೆ ತಿಳಿಸಿದೆ.



Join Whatsapp