ಉಪ ಚುನಾವಣೆ ಹಿನ್ನೆಲೆ: ತೃಣಮೂಲ ತೊರೆದ ತ್ರಿಪುರದ ಮಾಜಿ ಶಾಸಕ

Prasthutha|

ಗುವಾಹಟಿ: ತ್ರಿಪುರಾದಲ್ಲಿ ನಿರ್ಣಾಯಕ ಉಪಚುನಾವಣೆಗೂ ಮುನ್ನ ಮಾಜಿ ಶಾಸಕರೊಬ್ಬರು ಪಕ್ಷವನ್ನು ತೊರೆದಿದ್ದಾರೆ.

- Advertisement -

ಪರಿಶಿಷ್ಟ ಜಾತಿ ಸಮುದಾಯದ ನಾಯಕ ಆಶಿಸ್ ದಾಸ್ ಕಳೆದ ವರ್ಷ ಬಿಜೆಪಿ ತೊರೆದ ನಂತರ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

“ಬಿಜೆಪಿಗೆ ಸಹಾಯ ಮಾಡುವ ರೀತಿಯಲ್ಲಿ, ದೇಶದ ಉಳಿದ ಭಾಗಗಳಲ್ಲಿ ಕಾಂಗ್ರೆಸ್ ಅನ್ನು ದುರ್ಬಲಗೊಳಿಸುವ ಮೂಲಕ ತೃಣಮೂಲ ಪಶ್ಚಿಮ ಬಂಗಾಳದಲ್ಲಿ ತಮ್ಮನ್ನು ತಾವು ಭದ್ರಪಡಿಸಿಕೊಳ್ಳಲು ಬಯಸುತ್ತದೆ” ಎಂದು ದಾಸ್ ಹೇಳಿದ್ದರು.

- Advertisement -

ಅಲ್ಲದೆ, ತೃಣಮೂಲಕ್ಕೆ ಸೇರುವ ಮೊದಲು ದಾಸ್ ಬಿಜೆಪಿಯೊಂದಿಗಿನ ಸಂಬಂಧಕ್ಕಾಗಿ ಪ್ರಾಯಶ್ಚಿತವಾಗಿ ತಮ್ಮ ತಲೆ ಬೋಳಿಸಿಕೊಂಡಿದ್ದರು. ಅಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೊಗಳಿದ್ದರು.

ಚುನಾವಣಾ ಆಯೋಗವು ಅವರ ಕ್ಷೇತ್ರ ಸುರ್ಮಾ ಸೇರಿದಂತೆ ರಾಜ್ಯದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ವೇಳಾಪಟ್ಟಿಯನ್ನು ಘೋಷಿಸಿದೆ. ಇದರ ಎರಡು ದಿನಗಳ ನಂತರ ದಾಸ್ ತೃಣಮೂಲವನ್ನು ತೊರೆಯುವ ಘೋಷಣೆ ಮಾಡಿದ್ದಾರೆ.

ಕಳೆದ ವರ್ಷ ಬಿಜೆಪಿಯಿಂದ ತೃಣಮೂಲಕ್ಕೆ ದಾಸ್ ಪಕ್ಷಾಂತರವು ಅವರು ತಮ್ಮ ಅಸೆಂಬ್ಲಿ ಸದಸ್ಯತ್ವವನ್ನು ಕಳೆದುಕೊಳ್ಳಲು ಕಾರಣವಾಗಿತ್ತು.

ಜೂನ್ 23 ರಂದು ಉಪಚುನಾವಣೆಗಳನ್ನು ನಿಗದಿಪಡಿಸಲಾಗಿದೆ. ಇದು 2023 ರ ಆರಂಭಿಕ ವಿಧಾನಸಭಾ ಚುನಾವಣೆಗೆ ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ಇಂತಹ ಸಮಯದಲ್ಲಿ ತೃಣಮೂಲ ಕಾಂಗ್ರೆಸಿಗೆ ದಾಸ್ ರಾಜೀನಾಮೆ ಹಿನ್ನೆಡೆಯಾಗಿದೆ.

Join Whatsapp