ನವದೆಹಲಿ: ರಾಂಚಿಯಲ್ಲಿ ವಿಕಲಚೇತನ ಬಾಲಕನನ್ನು ವಿಮಾನ ಹತ್ತಲು ಅನುಮತಿಸದ ಇಂಡಿಗೋ ಏರ್ ಲೈನ್ಸ್’ಗೆ 5 ಲಕ್ಷ ರೂ. ದಂಡ ವಿಧಿಸಲಾಗಿದೆ.
ಇಂಡಿಗೋ ಸಂಸ್ಥೆಯ ಸಿಬ್ಬಂದಿ ವಿಕಲಚೇತನ ಮಗುವನ್ನು ಕೆಟ್ಟದಾಗಿ ನಡೆಸಿರುವುದು ದುರಂತ ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ ಹೇಳಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ, ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಲಾಗುವುದೆಂದು ತಿಳಿಸಿದೆ.
ಮಗುವನ್ನು ವಿಮಾನದಲ್ಲಿ ಹತ್ತಲು ಅನುಮತಿಸಲು ಸಿಬ್ಬಂದಿ ನಿರಾಕರಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.