ಶಿಕ್ಷಣ ಸಚಿವರು ಹೇಳಿದ್ದು ಸುಳ್ಳು | ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ ಎಂದ ಚಕ್ರತೀರ್ಥ

Prasthutha|

ಬೆಂಗಳೂರು : ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ, ಶಿಕ್ಷಣ ಸಚಿವರು ಮಾತನಾಡುವ ಭರದಲ್ಲಿ ಹಾಗೆ ಹೇಳಿದ್ದಾರೆ ಎಂದು ಪಠ್ಯ ಪರಿಷ್ಕರಣೆಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.

- Advertisement -

ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಅವರು, “ನಾನು ಕೇವಲ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುತ್ತೇನೆ. ನಮ್ಮ ಕೈ ಕೆಳಗೆ ವಿಷಯ ತಜ್ಞರು ಇರುತ್ತಾರೆ. ಅವರು ನೀಡುವ ಶಿಫಾರಸ್ಸುಗಳನ್ನು ನಾನು ಪರಿಷ್ಕರಣೆ ಮಾಡಿದ್ದೇನೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಕೂಡ ಆಗಿರುವುದರಿಂದ ನನಗೆ ಆ ಅಧಿಕಾರವಿದೆ. ನಾನು ಐದು ವರ್ಷದದಲ್ಲಿ ನಿರಂತರವಾಗಿ ಪಠ್ಯಪುಸ್ತಕಗಳ ಬಗ್ಗೆ ಮಾತನಾಡುತ್ತೇನೆ. ಈ ಪ್ರಕ್ರಿಯೆ ನೋಡಿ ನನ್ನನ್ನು ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ಮಾಡಿರಬಹುದು” ಎಂದಿದ್ದಾರೆ.

ಶಿಕ್ಷಣ ಸಚಿವರು ತನ್ನ ವಿದ್ಯಾರ್ಹತೆಯ ಬಗ್ಗೆ  ಹೇಳಿದ್ದನ್ನು ಅಲ್ಲಗಳೆದ ಚಕ್ರತೀರ್ಥ, ನಾನು ಐಐಟಿ ಹಾಗೂ ಸಿಇಟಿ ಪ್ರೊಫೆಸರ್ ಎಂಬುದನ್ನು ನಿರಾಕರಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.



Join Whatsapp