ಮುಂಬೈ: ಬಾಲಿವುಡ್’ನ ವಿವಾದಿತ ನಟಿ ಕಂಗನಾ ರಣಾವತ್ ಅಭಿನಯದ ಧಾಕಡ್ ಚಿತ್ರ ಒಂದೇ ವಾರದಲ್ಲಿ ಥಿಯೇಟರ್’ನಿಂದ ಎತ್ತಂಗಡಿಯಾಗಿದೆ. ಒಂದೇ ವಾರಕ್ಕೆ ಮುಗ್ಗರಿಸಿರುವ ಧಾಕಡ್ ಚಿತ್ರವು ಕಳಪೆ ಪ್ರದರ್ಶನದಿಂದಾಗಿ ಬಾಕ್ಸಾಫೀಸ್’ನಲ್ಲಿ ಹೀನಾಯವಾಗಿ ಸೋತಿದೆ. ನೂರು ಕೋಟಿ ಬಂಡವಾಳದ ಸಿನೆಮಾ ಕೇವಲ 1.55 ಕೋಟಿ ರೂ. ಅಷ್ಟೆ ಗಳಿಸಿದೆ.
ಆ್ಯಕ್ಷನ್ ಅವತಾರ ತಾಳಿದ್ದ ಕಂಗನಾ ಅಭಿನಯದ ಧಾಕಡ್ ಚಿತ್ರವು ಮೇ 20ರಂದು ವಿಶ್ವಾದ್ಯಂತ ಬಿಡುಗಡೆಗೊಂಡಿತ್ತು. ಮೂರು ದಿನ ಕಳೆಯುವುದರೊಳಗೆ ಕೆಲವೆಡೆ ಪ್ರದರ್ಶನವನ್ನೇ ರದ್ದುಗೊಳಿಸಲಾಗಿತ್ತು. ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಒಬ್ಬ ಪ್ರೇಕ್ಷಕನೂ ಬಂದಿಲ್ಲ ಎಂದು ವರದಿಯಾಗಿದ್ದವು.
ಚಿತ್ರಕ್ಕೆ ಹಾಕಿದ ಬಂಡವಾಳ ಸೇರಿದಂತೆ ಕಂಗನಾಗೆ ಕೊಟ್ಟಿರುವ ಸಂಭಾವನೆ ಕೂಡ ಬರುವುದು ಅನುಮಾನ ಎನ್ನಲಾಗುತ್ತಿದ್ದು, ನಿರ್ಮಾಪಕರು ಕಂಗಾಲಾಗಿದ್ದಾರೆ.