ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಫೇಸ್ ಬುಕ್ ನಲ್ಲಿ ಕನ್ನಡಿಗರಿಗೆ ಅವಮಾನಿಸಿದ್ದ ಹಳೆಯ ಪೋಸ್ಟ್ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆ ಪೊಸ್ಟ್ ಮಾಡಿದ್ದಅವರು, “ಮೆಟ್ರೋದಲ್ಲಿ ಇಂದೀ ಏರಿಕೆ ಆಗಿದೆ ಅನ್ನಿಸ್ತಾ ಇರೋದು ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರದ, ಕನ್ನಡ ಬಿಟ್ಟು ಬೇರೆ ಯಾವ ಭಾಷೆಯನ್ನೂ ಕಲಿಯದ ಸೋಮಾರಿಗಳಿಗೆ ಮಾತ್ರ” ಎಂದು ಹೇಳಿದ್ದರು.
“ನನಗೆ ನನ್ನ ಕನ್ನಡದ ಮೇಲೆ ಹಿಂದಿ ದಬ್ಬಾಳಿಕೆ ನಡೆಸಿದೆ ಎಂದು ಯಾವತ್ತೂ ಅನಿಸಿಲ್ಲ. ಯಾಕೆಂದರೆ ಫಸ್ಟ್ ಆಫ್ ಆಲ್, ಕನ್ನಡವೇ ನನ್ನತನ ಮತ್ತು ನನ್ನ ಭಾಷೆಯ ಮೇಲೆ ಹೇರಿಕೆಯಾದ ಮೊದಲ ಭಾಷೆ. ನಿನಗೆ ಕನ್ನಡ ಮೊದಲೋ ತುಳು ಮೊದಲೋ ಎಂದು ಯಾರಾದರೂ ಕೇಳಿದರೆ, ಒಂದೇ ಭಾಷೆಯನ್ನು ಆರಿಸುವ ಸ್ವಾತಂತ್ರ್ಯ ಮತ್ತು ಮಿತಿ ಕಲ್ಪಿಸಿದರೆ ನನ್ನ ಮೊದಲ ಆಯ್ಕೆ ತುಳು. ಯಾಕೆಂದರೆ ಅದು ನನ್ನ ಮಾತೃಭಾಷೆ. ಹುಟ್ಟಿ ಮೊದಲ ಐದಾರು ವರ್ಷಗಳವರೆಗೂ ನಾನು ಮಾತಾಡಿದ್ದು, ನನ್ನ ಬೇಡಿಕೆಗಳನ್ನಿಟ್ಟದ್ದು, ನನ್ನ ಸಂತೋಷವನ್ನು ಹಂಚಿಕೊಂಡದ್ದು ತುಳುವಿನಲ್ಲಿ. ಕನ್ನಡ ನನ್ನೊಳಗೆ ಪ್ರವೇಶ ಪಡೆದದ್ದು ಶಾಲೆಯಲ್ಲಿ ಕಲಿಯಬೇಕಿದ್ದ ಭಾಷೆಯಾಗಿ” ಎಂದು ಬರೆದುಕೊಂಡಿದ್ದರು.
ಇಂತಹ ಕನ್ನಡ ವಿರೋಧಿಯವನನ್ನು ಕರ್ನಾಟಕದ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿ ಮಾಡಿದ್ದು ಸಾಮಾಜಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಮಧ್ಯಪ್ರವೇಶಿಸಿ ರೋಹಿತ್ ಚಕ್ರತೀರ್ಥ ಮತ್ತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ವಜಾ ಮಾಡಬೇಕು ಎಂಬ ಒತ್ತಾಯಗಳು ಸಾಮಾಜಿಕ ವಲಯಗಳಿಂದ ಕೇಳಿಬರುತ್ತಿವೆ.