ಕಾರ್ತಿ ಚಿದಂಬರಂರನ್ನು ಬಂಧಿಸುವುದಾದರೆ 3 ದಿನ ಮುಂಚಿತವಾಗಿ ನೋಟಿಸ್ ನೀಡಿ: ಸಿಬಿಐಗೆ ನ್ಯಾಯಾಲಯ ನಿರ್ದೇಶನ

Prasthutha|

ನವದೆಹಲಿ: ಚೀನಾ ಪ್ರಜೆಗಳಿಗೆ ವೀಸಾ ನೀಡಿರುವ ಪ್ರಕರಣದಲ್ಲಿ ಲೋಕಸಭಾ ಸದಸ್ಯ ಕಾರ್ತಿ ಚಿದಂಬರಂ ಅವರನ್ನು ಬಂಧಿಸುವ ಅಗತ್ಯ ನಿರ್ಮಾಣವಾದಲ್ಲಿ ಮೂರು ದಿನ ಮುಂಚಿತವಾಗಿ ಅವರಿಗೆ ಈ ಕುರಿತು ಲಿಖಿತ ನೋಟಿಸ್ ನೀಡುವಂತೆ ಕೇಂದ್ರೀಯ ತನಿಖಾ ದಳಕ್ಕೆ ದೆಹಲಿಯ ವಿಶೇಷ ನ್ಯಾಯಾಲಯ ನಿರ್ದೇಶಿಸಿದೆ.

- Advertisement -

ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆ ನಡೆಸಿದ ಸಿಬಿಐ ಪ್ರಕರಣಗಳನ್ನು ಆಲಿಸುವ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್ಪಾಲ್ ಅವರು ಈ ಆದೇಶ ಮಾಡಿದ್ದಾರೆ. ಕಾರ್ತಿ ಆಪ್ತ ಎಸ್ ಭಾಸ್ಕರರಾಮನ್ ಅವರನ್ನು ಸಿಬಿಐ ವಶಕ್ಕೆ ಪಡೆಯುತ್ತಿದ್ದಂತೆ ಕಾರ್ತಿ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ಮೇ 14ರಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ನಿವಾಸದಲ್ಲಿ ಸಿಬಿಐ ಶೋಧ ನಡೆಸಿತ್ತು. 50 ಲಕ್ಷ ಲಂಚ ಪಡೆದು ಕಾರ್ತಿ ಚಿದಂಬರಂ ಅವರು ಚೀನಾದ 250 ನಾಗರಿಕರಿಗೆ ವೀಸಾ ಕೊಡಿಸಲು ಸಹಾಯಕ್ಕೆ ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.



Join Whatsapp