10 ನಿಮಿಷಗಳಲ್ಲಿ ಡೆಲಿವರಿ ಯೋಜನೆ ಕೈಬಿಟ್ಟ ಝೊಮ್ಯಾಟೊ

Prasthutha|

ಬೆಂಗಳೂರು: 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಆಹಾರ ಡೆಲಿವರಿ ಮಾಡಲು ಹೊರಟಿದ್ದ ಆನ್ ಲೈನ್ ಆಹಾರ ವಿತರಣೆ ಮತ್ತು ರೆಸ್ಟೋರೆಂಟ್ ಬುಕಿಂಗ್ ಕಂಪನಿ ಝೊಮ್ಯಾಟೊ, ಗುರ್ಗಾಂವ್ ನಲ್ಲಿ ನಡೆಸಿದ ಪ್ರಯೋಗ ಹೇಳಿಕೊಳ್ಳುವಂತಹ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಲು ನಿರ್ಧರಿಸಿದೆ.

- Advertisement -

“ವಿತರಣಾ ಸಿಬ್ಬಂದಿ ಕೊರತೆ ಮತ್ತು ಉತ್ತರದಲ್ಲಿ ತೀವ್ರವಾದ ಬಿಸಿ ಗಾಳಿಯಿಂದ ಸೀಮಿತ ಸಿಬ್ಬಂದಿ ಲಭ್ಯವಿದ್ದರಿಂದ ಡೆಲಿವರಿಗೆ 15-20 ನಿಮಿಷಗಳ ವಿಳಂಬವಾಗುತ್ತಿದೆ,” ಎಂದು ಉದ್ಯಮದ ಹಲವು ಮೂಲಗಳು ಹೇಳಿವೆ. “ಇದಲ್ಲದೆ, ತಕ್ಷಣದ ಡೆಲಿವರಿಗೆ ಇನ್ನೂ ಪ್ರತ್ಯೇಕ ವಿತರಣಾ ತಂಡವಿಲ್ಲ,” ಎಂದು ಅದು ವಿವರಿಸಿದೆ.

ಆ್ಯಪ್ ನಲ್ಲಿ ಝೊಮ್ಯಾಟೊ ಇನ್ ಸ್ಟಂಟ್ ಗೆ ಸರಾಸರಿ 15-20 ನಿಮಿಷಗಳ ವಿತರಣಾ ಸಮಯ ತೋರಿಸುತ್ತಿದ್ದು, ಕಂಪನಿ ಮಾತ್ರ ಏಪ್ರಿಲ್ ನಲ್ಲಿ ಪ್ರಾರಂಭವಾದ ಯೋಜನೆಯು ನಿರೀಕ್ಷೆಯಂತೆ ಚಾಲನೆಯಲ್ಲಿದೆ ಎಂದು ಹೇಳಿಕೊಂಡಿದೆ.



Join Whatsapp