ಜ್ಞಾನವಾಪಿ ಮಸೀದಿಯು ಮಸೀದಿಯಾಗಿಯೇ ಉಳಿಯಲಿದೆ ಎಂದ ಉವೈಸಿ: ‘ಇದು ವಿವಾದಾತ್ಮಕ ಹೇಳಿಕೆ’ ಎಂದ ಟಿವಿ 9!

Prasthutha|

ಬೆಂಗಳೂರು: ವಾರಣಾಸಿಯ ಜ್ಞಾನವಾಪಿ ಮಸೀದಿಯ ಕುರಿತು ಸೃಷ್ಟಿಸಲಾಗಿರುವ ವಿವಾದ ಬಿಗಿಯಾಗುತ್ತಲಿದೆ. ಈ ಕುರಿತು ಟ್ವೀಟ್ ಮಾಡಿದ್ದ ಸಂಸದ ಅಸಾದುದ್ದೀನ್ ಉವೈಸಿ, ಜ್ಞಾನವಾಪಿ ಮಸೀದಿಯು ಮಸೀದಿಯಾಗಿಯೇ ಉಳಿಯಲಿದೆ ಎಂದಿದ್ದಾರೆ. ಆದರೆ ಈ ಮಾತನ್ನು ಕನ್ನಡದ ಖಾಸಗಿ ಮಾಧ್ಯಮ ಸಂಸ್ಥೆ ಟಿವಿ9 ವಿವಾದಾತ್ಮಕ ಹೇಳಿಕೆ ಎಂದು ಸುದ್ದಿ ಪ್ರಸಾರ ಮಾಡಿದೆ.

- Advertisement -

ಉವೈಸಿ ಹೇಳಿದ್ದೇನು ?
ಜ್ಞಾನವಾಪಿ ಮಸೀದಿ ಸಂಕೀರ್ಣದ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರ ಹೇಳಿಕೆಯ ಬಳಿಕ, ನ್ಯಾಯಾಲಯವು ಅದನ್ನು ಸಾರ್ವಜನಿಕರಿಗೆ ಮುಚ್ಚುವಂತೆ ಆದೇಶಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಉವೈಸಿ, 1949ರ ಡಿಸೆಂಬರ್ ನಲ್ಲಿ ಬಾಬರಿ ಮಸೀದಿ ಕುರಿತು ನಡೆದದ್ದನ್ನೇ ಪುನರಾವರ್ತಿಸಲಾಗಿದೆ. ಇದು 1991ರ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಜ್ಞಾನವಾಪಿ ಮಸೀದಿಯು ನ್ಯಾಯಾಲಯ ತೀರ್ಪು ನೀಡುವ ದಿನದವರೆಗೆ ಮಸೀದಿಯಾಗಿಯೇ ಉಳಿಯುತ್ತದೆ ಎಂದಿದ್ದರು.

- Advertisement -

ಆದರೆ ಉವೈಸಿಯ ಸಹಜವಾದ ಹೇಳಿಕೆಯನ್ನು ಪ್ರಸಾರ ಮಾಡಿರುವ ಟಿವಿ9, ‘ಜ್ಞಾನವಾಪಿ ಮಸೀದಿ ಮಸೀದಿಯಾಗಿ ಉಳಿಯಲಿದ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ಉವೈಸಿ’ ಎಂದು ಪ್ರಕಟಿಸಿದೆ.

Join Whatsapp