ತಾಜ್ ಮಹಲ್ ಒಂದು ಮಹಾ ಅದ್ಭುತ: ಎಲೋನ್ ಮಸ್ಕ್

Prasthutha|

ನವದೆಹಲಿ : ವಿಶ್ವದ ಅತಿದೊಡ್ಡ ಶ್ರೀಮಂತ, ಟೆಸ್ಲಾ ಕಂಪನಿಯ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಭಾರತದ ಹೆಮ್ಮೆ ಮತ್ತು ವಿಶ್ವದ ಏಳನೇ ಅದ್ಭುತವಾದ ತಾಜ್ ಮಹಲ್ ಕುರಿತು ಅಭಿಮಾನದ ಮಾತುಗಳನ್ನಾಡಿದ್ದಾರೆ.

- Advertisement -

ಟ್ವಿಟರ್ ಬಳಕೆದಾರರೊಬ್ಬರು ಆಗ್ರಾದ ತಾಜ್ ಮಹಲ್ ಗೋಡೆಗಳು ಮತ್ತು ಕಂಬಗಳ ಕೆತ್ತನೆಗಳ ಫೋಟೋವನ್ನು ಹಂಚಿಕೊಂಡಿದ್ದಕ್ಕೆ ಪ್ರತಿಕ್ರಯಿಸಿದ ಎಲೋನ್ ಮಸ್ಕ್, ಕೆಂಪು ಕೋಟೆ ಮತ್ತು ತಾಜ್ ಮಹಲ್ ಅನ್ನು ಹೊಗಳಿದ್ದು, ನಾನೂ ಕೂಡ ತಾಜ್ ಮಹಲ್ ನೋಡಲು ಆಗ್ರಾಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ.

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ತನ್ನ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದು ಇದೀಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಕೂಡ ತಾಜ್ ಸೌಂದರ್ಯಕ್ಕೆ ಮನಸೋತಿದ್ದಾರೆ.

- Advertisement -

‘ಇದು ಅದ್ಭುತವಾಗಿದೆ. ನಾನು ಕೂಡ 2007 ರಲ್ಲಿ ಆಗ್ರಾಗೆ ಹೋಗಿದ್ದೆ ಮತ್ತು ತಾಜ್ ಮಹಲ್ ಅನ್ನು ನೋಡಿದೆ, ಅದು ನಿಜವಾಗಿಯೂ ವಿಶ್ವದ ಅದ್ಭುತವಾಗಿದೆ ಎಂದು ಭಾರತದ ವಾಸ್ತುಶಿಲ್ಪದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.



Join Whatsapp