ನಿಷೇಧಿತ ಆಕ್ಸಿಟೋಸಿನ್ ಬಳಕೆ: ಐವರು ಡೈರಿ ಮಾಲೀಕರ ವಿರುದ್ಧ ಪ್ರಕರಣ ದಾಖಲು

Prasthutha|

ಅಹ್ಮದಾಬಾದ್: ಎಮ್ಮೆಗಳ ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ನಿಷೇಧಿತ ಆಕ್ಸಿಟೋಸಿನ್ ಇಂಜೆಕ್ಷನ್ ಬಳಸಿದ ಆರೋಪದ ಮೇಲೆ ಬನಸ್ಕಾಂತದ ಪಾಲನ್ ಪುರದ ಐವರು ಡೈರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

- Advertisement -

ಆಕ್ಸಿಟೋಸಿನ್ ಒಂದು ವಿಧದ ಔಷಧವಾಗಿದ್ದು, ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಬಳಸುತ್ತಾರೆ. ಇದರ ದುರುಪಯೋಗವನ್ನು ತಪ್ಪಿಸಲು 2018 ರಿಂದ ಕೇಂದ್ರ ಸರ್ಕಾರವು ಮಾರಾಟವನ್ನು ನಿಷೇಧಿಸಿತ್ತು.

ಪಾಲನ್ ಪುರದ ಕೆಲವು ಡೈರಿ ಫಾರ್ಮ್ ಗಳಿಗೆ ಇಬ್ಬರು ಪ್ರವಾಸಿಗರ ಭೇಟಿಯ ಸಂದರ್ಭದಲ್ಲಿ ಈ ದಂಧೆಯು ಬೆಳಕಿಗೆ ಬಂದಿದೆ ಎಂದು ಪೋಲಿಸರು ತಿಳಿಸಿದ್ದಾರೆ.



Join Whatsapp