ಪ್ರಧಾನಿ ಮೋದಿ ಹಿಟ್ಲರ್ ನ ಅನುಯಾಯಿ: ಸಂಜಯ್ ರಾವುತ್

Prasthutha|

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ನ ಅನುಯಾಯಿ ಎಂದು ಶಿವಸೇನಾ ಪ್ರಧಾನ ವಕ್ತಾರ ಹಾಗೂ ರಾಜ್ಯಸಭೆ ಸದಸ್ಯ ಸಂಜಯ್ ರಾವುತ್ ಹೇಳಿದ್ದಾರೆ.

- Advertisement -

ಶಿವಸೇನೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ನನ್ನು  ಪ್ರಧಾನಿ ನರೇಂದ್ರ ಮೋದಿಯವರು ‘ಪ್ರೀತಿಸುತ್ತಾರೆ ’ ಮತ್ತು ಆತನನ್ನು ಅನುಸರಿಸುತ್ತಿದ್ದಾರೆ. ಹಿಟ್ಲರ್ ಮಾಡುತ್ತಿದ್ದ ಅದೇ ರೀತಿಯ ಕಾರ್ಯಕ್ರಮಗಳನ್ನು ಮೋದಿ ಹಾಗೂ ಅವರ ಪಕ್ಷದವರು ಕೂಡಾ ಮಾಡುತ್ತಿದ್ದಾರೆ. ಹಾಗೆಂದು ತಾನು ಮೋದಿಯವರನ್ನು ಟೀಕಿಸುತ್ತಿಲ್ಲ. ಒಮ್ಮೆ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿ ಎಂದು ಹೇಳಿದರು.

1936ರಲ್ಲಿ ಬರ್ಲಿನ್ ಒಲಿಂಪಿಕ್ಸ್ ನ ಆತಿಥ್ಯವನ್ನು ಜರ್ಮನಿ ವಹಿಸಿಕೊಂಡಿದ್ದನ್ನು ಪ್ರಸ್ತಾಪಿಸಿದ ರಾವುತ್, ಹಿಟ್ಲರ್ ಜನಪ್ರಿಯ ನಾಯಕನಾಗಿದ್ದ, ನಂತರದಲ್ಲಿ ಆತ ಸೋಲನ್ನಪ್ಪಿರಬಹುದು. ಆತನನ್ನು ಸೇನೆಯ ಸ್ಥಾಪಕ ಬಾಳ ಠಾಕ್ರೆಯವರೂ ಮೆಚ್ಚಿಕೊಂಡಿದ್ದರು.  ಅದೇ ರೀತಿ ಪ್ರಧಾನಿ ಮೋದಿ ಕೂಡ ಆತನನ್ನು ಪ್ರೀತಿಸುತ್ತಾರೆ ಎಂದು ಹೇಳಿದರು.

Join Whatsapp