ನವದೆಹಲಿ: ದೇಶದ ಯಾವುದೇ ಭಾಗದಲ್ಲಿ ಚಂದ್ರ ದರ್ಶನವಾದ ಮಾಹಿತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಮೇ 3ರಂದು ಮಂಗಳವಾರ ಆಚರಿಸಲು ಕೇಂದ್ರೀಯ ಚಂದ್ರ ದರ್ಶನ ಸಮಿತಿ ತೀರ್ಮಾನಿಸಿದೆ.
ದೆಹಲಿ, ಲಕ್ನೋ, ಕೋಲ್ಕತ್ತಾ, ಹೈದರಾಬಾದ್ ಸೇರಿದಂತೆ ಯಾವುದೇ ಭಾಗದಲ್ಲಿ ಚಂದ್ರ ದರ್ಶನ ಆಗಿಲ್ಲ ಎಂದು ಸಮಿತಿ ತಿಳಿಸಿದೆ.
ಕರಾವಳಿಯಲ್ಲಿ ಇಂದು ಶವ್ವಾಲ್ ತಿಂಗಳ(ಈದುಲ್ ಫಿತ್ರ್) ಚಂದ್ರದರ್ಶನವಾಗದ ಕಾರಣ ನಾಳೆ ರಮಳಾನ್ 30 ಪೂರ್ಣಗೊಳಿಸಿ ಮೇ 03 ರ ಮಂಗಳವಾರ ದಂದು ಶವ್ವಾಲ್ 01 (ಈದುಲ್ ಫಿತ್ರ್) ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ತೀರ್ಮಾನಿಸಿರುತ್ತಾರೆ ಎಂದು
ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಈದ್ಗಾ ಮಸೀದಿ ಮಂಗಳೂರು ಇದರ ಅಧ್ಯಕ್ಷ ಹಾಜಿ ಯೆನೆಪೊಯ ಅಬ್ದುಲ್ಲ ಕುಂಞಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.