ನವದೆಹಲಿ: 90 ವರ್ಷದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಒಡಿಸ್ಸಿ ನೃತ್ಯಗಾರ್ತಿ ಗುರು ಮಾಯಾಧರ್ ರಾವತ್ ಸೇರಿದಂತೆ ಒಟ್ಟು ಎಂಟು ಮಂದಿ ಖ್ಯಾತ ಕಲಾವಿದರಿಗೆ ಮೇ 2 ರೊಳಗೆ ಸೌಲಭ್ಯಗಳನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಬುಧವಾರ ಹೇಳಿದೆ
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು 28 ಕಲಾವಿದರಲ್ಲಿ, ಇನ್ನೂ ಸುಮಾರು ಎಂಟು ಕಲಾವಿದರು ಅನೇಕ ನೋಟಿಸ್ ಗಳ ಹೊರತಾಗಿಯೂ ತಮ್ಮ ಸರ್ಕಾರಿ ವಸತಿಗೃಹಗಳಿಂದ ಹೊರಬಂದಿಲ್ಲ ಎಂದು ಹೇಳಿ ಮನೆ ಖಾಲಿ ಮಾಡಲು ಗಡುವು ನೀಡಿದ್ದಾರೆ.
“ಈ ಎಂಟು ಕಲಾವಿದರು ತಮ್ಮ ಬಂಗಲೆಗಳನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ನಮಗೆ ಭರವಸೆ ನೀಡಿದ್ದರು ಮತ್ತು ಇನ್ನೂ ಕೆಲವು ದಿನಗಳನ್ನು ಕೋರಿದರು. ಮೇ 2 ರೊಳಗೆ ವಸತಿಗಳನ್ನು ಖಾಲಿ ಮಾಡುವುದಾಗಿ ಅವರು ನಮಗೆ ಲಿಖಿತವಾಗಿ ಭರವಸೆ ನೀಡಿದ್ದಾರೆ ಮತ್ತು ಅಲ್ಲಿಯವರೆಗೆ ನಾವು ಅವರಿಗೆ ಸಮಯ ನೀಡಿದ್ದೇವೆ” ಎಂದು ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಕಾರಿಗಳ ತಂಡವನ್ನು ಅವರ ಸರ್ಕಾರಿ ಬಂಗಲೆಗೆ ಕಳುಹಿಸಲಾಗಿದ್ದು, ಬಂಗಲೆಯ ಹೊರಗೆ ಇರಿಸಲಾದ ಅವರ ಗೃಹೋಪಯೋಗಿ ವಸ್ತುಗಳನ್ನು ತೋರಿಸುವ ವೀಡಿಯೊಗಳು ಮತ್ತು ಚಿತ್ರಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ