ಬೆಂಗಳೂರು : ಏಪ್ರಿಲ್ 25 ರಂದು, ಬೆಂಗಳೂರು ಪ್ರದೇಶದಲ್ಲಿ ಸೂರ್ಯನು ನೆತ್ತಿಯ ಮೇಲೆ ಕ್ಲಪ್ತವಾಗಿ ಹಾದು ಹೋಗುವುದರಿಂದ ನೆರಳು ಕಾಣಸಿಗುವುದಿಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಸೂರ್ಯನು ನಿಖರವಾಗಿ ಉತ್ತುಂಗದಲ್ಲಿದ್ದಾಗ ಮಧ್ಯಾಹ್ನದ ಸಮಯದಲ್ಲಿ ನೆರಳು ಶೂನ್ಯವಾಗಿರುತ್ತದೆ. ಆ ದಿನ ಯಾವುದೇ ಸ್ತಂಭಕ್ಕೆ ನೆರಳು ಇರುವುದಿಲ್ಲ. ಈ ಪರಿಣಾಮವನ್ನು ನೋಡಲು ಯಾವುದೇ ವಿಶೇಷ ಗ್ಯಾಜೆಟ್ ಅಗತ್ಯ ಇಲ್ಲದಿರುವುದರಿಂದ ಜನಸಾಮಾನ್ಯರು ಇದನ್ನು ವೀಕ್ಷಿಸಬಹುದಾಗಿದೆ.
ಸಮಭಾಜಕ ವೃತ್ತದಿಂದ ಕರ್ಕಾಟಕ ಸಂಕ್ರಾತಿ ವೃತ್ತದವರೆಗೆ ಪ್ರದೇಶಗಳಿಗೆ ಬೇರೆ ಬೇರೆ ತಾರೀಖುಗಳು ಅನ್ವಯವಾಗುತ್ತಿದ್ದು ನಾಳೆ ಬೆಂಗಳೂರಿನಲ್ಲಿ ನೆರಳು ಶೂನ್ಯವಾಗಿರುತ್ತದೆ ಎನ್ನಲಾಗಿದೆ