ಅರ್ ಎಸ್ ಎಸ್ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಯ ದೊಡ್ಡ ಶತ್ರು : ಬಿ.ಕೆ. ಹರಿಪ್ರಸಾದ್

Prasthutha|

ಮಂಗಳೂರು : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ “ಸಂಚುಗಾರ ಸಂಘಪರಿವಾರ” ಪುಸ್ತಕದ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮ ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆಯಿತು.

- Advertisement -

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ರಾಜ್ಯಸಭಾ ಸದಸ್ಯ, ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಮಾತನಾಡಿ, “ಆರ್ ಎಸ್ ಎಸ್ ಹಾಗೂ ಸಂಘಪರಿವಾರ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಯ ದೊಡ್ಡ ಶತ್ರು ಇದರ ವಿರುದ್ಧ ಎಲ್ಲರೂ ಒಂದಾಗಿ ಈ ದೇಶವನ್ನು ಉಳಿಸಬೇಕಾಗಿದೆ” ಎಂದು ತಿಳಿಸಿದರು.

ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಮಾತನಾಡಿ, “ಸಂಘಪರಿವಾರವನ್ನು ವಿರೋಧಿಸುವ ಧ್ವನಿಗಳು ಒಂದಾಗಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ‌. ಭಾರತವನ್ನು ಉಳಿಸಬೇಕೆಂಬ ಉದ್ದೇಶವಿರುವವರು ಫ್ಯಾಸಿಸಮ್ ವಿರುಧ್ದದ ತಂತ್ರಗಾರಿಕೆಯನ್ನು ಮಾಡಬೇಕಾಗಿದೆ. ಪ್ರಸ್ತುತ ಈ ದೇಶವನ್ನು ಸರಿಯಾಗಿ ತಿಳಿದುಕೊಂಡಂತಹ, ಧೈರ್ಯವಂತ ಮತ್ತು ನೈತಿಕತೆ ಇರುವ ನಾಯಕತ್ವದ ಅಗತ್ಯತೆಯಿದೆ, ಆ ನಾಯಕತ್ವದ ಮೂಲಕ ಹೊಸ ಬದಲಾವಣೆಯನ್ನು ನಾವು ಕಾಣಬೇಕಿದೆ” ಎಂದು ಹೇಳಿದರು.

- Advertisement -

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಪಟ್ಟಾಭಿರಾಮ ಸೋಮಯಾಜಿ ಹಾಗೂ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಇರ್ಷಾದ್ ಕಾವು ಕಾರ್ಯಕ್ರಮದಲ್ಲಿ ಮಾತನಾಡಿದರು. ವುಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್,  ಸಿ ಎಫ್ ಐ ಮಂಗಳೂರು ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಸಭೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ಸಮಿತಿ  ಸದಸ್ಯ ಇಮ್ರಾನ್ ಪಿ ಜೆ ಸ್ವಾಗತಿಸಿದರು. ಸಮಿತಿ ಸದಸ್ಯ ರಿಯಾಝ್ ಕಡಂಬು ಕಾರ್ಯಕ್ರಮ ನಿರೂಪಿಸಿದರು.



Join Whatsapp