ಪಾಲಕ್ಕಾಡ್: ಎಸ್ ಡಿಪಿಐ ಮುಖಂಡ ಝುಬೈರ್ ಅವರ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರು ಆರ್ ಎಸ್ ಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿನೀಶ್, ಸುದರ್ಶನ್, ಶ್ರೀಜಿತ್ ಹಾಗೂ ಶೈಜು ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಎ.ಆರ್.ಕ್ಯಾಂಪ್ ನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇವರೆಲ್ಲರೂ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದು, ಅಪರಾಧ ಹಿನ್ನೆಲೆಯವರಾಗಿದ್ದಾರೆ. ಈ ಹಿಂದೆ ಎಸ್ ಡಿಪಿಐ ಕಾರ್ಯಕರ್ತ ಝಾಕಿರ್ ಹುಸೈನ್ ಎಂಬವರ ಮೇಲೆ ನಡೆದ ಕೊಲೆಯತ್ನ ಪ್ರಕರಣದಲ್ಲಿ ಸುದರ್ಶನ್, ಶ್ರೀಜಿತ್ ಹಾಗೂ ಶೈಜು ಜೈಲು ಸೇರಿದ್ದರು. ಇತ್ತೀಚೆಗಷ್ಟೇ ಇವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಝುಬೈರ್ ಅವರನ್ನು ಇದೇ ತಂಡ ಹತ್ಯೆಗೈದಿರಬಹುದು ಎಂಬ ಶಂಕೆಯ ಮೇಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದುಷ್ಕೃತ್ಯಕ್ಕೆ ಬಳಸಿದ ಕಾರನ್ನು ಬಾಡಿಗೆಗೆ ತಂದ ರಮೇಶ್ ಎಂಬಾತ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಝುಬೈರ್ ಅವರು ಶುಕ್ರವಾರ ನಮಾಝ್ ಮುಗಿಸಿ ಬೈಕ್ ನಲ್ಲಿ ತನ್ನ ತಂದೆಯೊಂದಿಗೆ ಮನೆಗೆ ಹಿಂದಿರುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿ ಪರಾರಿಯಾಗಿದ್ದಾರು.