ಬೈ ಎಲೆಕ್ಷನ್: ಮುಗ್ಗರಿಸಿದ ಬಿಜೆಪಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ -ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಜಯಭೇರಿ

Prasthutha|

ನವದೆಹಲಿ: ಉಪ ಚುನಾವಣೆ ಫಲಿತಾಂಶಗಳು ಇದೀಗ ಹೊರಬಿದ್ದಿದ್ದು, ತೃಣಮೂಲ ಕಾಂಗ್ರೆಸ್ ಪ್ರಸ್ತುತ ಪಶ್ಚಿಮ ಬಂಗಾಳದ ಬಾಲಿಗಂಜ್ ಮತ್ತು ಅಸನ್ಸೋಲ್ ಸ್ಥಾನಗಳೆರಡರಲ್ಲೂ ಮುನ್ನಡೆ ಸಾಧಿಸಿದ್ದರೆ, ಬಿಹಾರದ ಬೊಚಾಹಾ ವಿಧಾನಸಭಾ ಕ್ಷೇತ್ರದಲ್ಲಿ ಆರ್ ಜೆಡಿ ಮುಂದಿದೆ. ಏತನ್ಮಧ್ಯೆ, ಮಹಾರಾಷ್ಟ್ರ ಮತ್ತು ಛತ್ತೀಸ್ ಗಢ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

- Advertisement -

ಬಂಗಾಳದ ಬಲ್ಲಿಗಂಜ್, ಛತ್ತೀಸ್ ಗಢದ ಖೈರಗಡ, ಬಿಹಾರದ ಬೊಚಾಹಾನ್ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಉತ್ತರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದ್ದು ಇದೀಗ ಫಲಿತಾಂಶ ಹೊರಬಿದ್ದಿದೆ.

ಬಿಜೆಪಿಯ ಅಗ್ನಿಮಿತ್ರ ಪಾಲ್ ವಿರುದ್ಧ  ತೃಣಮೂಲ ಕಾಂಗ್ರೆಸ್ ಪಕ್ಷವು ಅಸನ್ಸೋಲ್ ಅನ್ನು ಪ್ರತಿನಿಧಿಸಲು ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರನ್ನು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿತ್ತು.. ಏತನ್ಮಧ್ಯೆ, ಬಿಜೆಪಿ ತೊರೆದು ಇತ್ತೀಚೆಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸೇರಿದ ಬಾಬುಲ್ ಸುಪ್ರಿಯೋ ಅವರನ್ನು ಬಾಲಿಗಂಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು ಮುಖಭಂಗಕ್ಕೀಡಾಗಿದೆ.



Join Whatsapp