ಖಾರ್ಗೋನ್: ಆದಿತ್ಯವಾರ ಖಾರ್ಗೋನ್ ನಲ್ಲಿ ರಾಮನವಮಿ ಉತ್ಸವದ ವೇಳೆ ನಡೆದ ಕಲ್ಲುತೂರಾಟ ಪ್ರಕರಣದ ನೆಪವೊಡ್ಡಿ ಮುಸ್ಲಿಮರ ಮನೆ, ಅಂಗಡಿಗಳನ್ನು ಇಂದು ಮದ್ಯಪ್ರದೇಶ ಸರಕಾರ ಧ್ವಂಸಗೈದಿದೆ. ಕಳೆದ ದಿನ ರಾಮನವಮಿ ಉತ್ಸವದಂದು ನಡೆದಿದ್ದ ಮೆರವಣಿಗೆಯ ವೇಳೆ ಖಾರ್ಗೋನ್’ನಲ್ಲಿ ಹಿಂಸಾಚಾರ ಉಂಟಾಗಿತ್ತು.
ಇದೀಗ ಕಲ್ಲುತೂರಾಟದ ನೆಪವೊಡ್ಡಿ ಶಿವರಾಜ್ ಸಿಂಘ್ ಚೌಹಾನ್ ನೇತೃತ್ವದ ಮಧ್ಯಪ್ರದೇಶ ಸರಕಾರ ಖರ್ಗೋನ್ ನಲ್ಲಿರುವ ಮುಸ್ಲಿಮರ ಮನೆಗಳನ್ನು ಬುಲ್ಡೋಝರ್ ಬಳಸಿ ಧ್ವಂಸಗೈದಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಮನೆಗಳನ್ನು ದ್ವಂಸಗೈಯ್ಯುವ ವೇಲೆ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ 70 ಕ್ಕೂ ಹೆಚ್ಚು ಮುಸ್ಲಿಮರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ, ‘ಅತ್ಯಾಚಾರಿಗಳು ಮತ್ತು ಅತ್ಯಾಚಾರಿಗಳನ್ನು ಬೆಂಬಲಿಸುವವರ ಮೇಲೆ ಮಾಮು ಬುಲ್ಡೋಜರ್ ಕೆಲಸ ಮಾಡುವುದಿಲ್ಲ. ಅವರುಗಳನ್ನು ಕಂಡ ಕೂಡಲೇ ಬುಲ್ಡೋಜರ್‌ಗಳೂ ಕೂಡ ಓಡಿ ಹೋಗುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.