ನವದೆಹಲಿ: ಪ್ರಸಕ್ತ ಭಾರತದ ಸಂವಿಧಾನ ಅಪಾಯದಲ್ಲಿದ್ದು, ಅದನ್ನು ಉಳಿಸುವಂತಾಗಲು ಸಂಸ್ಥೆಗಳನ್ನು ರಕ್ಷಿಸಬೇಕಾಗಿದೆ. ಆದರೆ ಎಲ್ಲಾ ಸಂಸ್ಥೆಗಳು ಆರೆಸ್ಸೆಸ್ ಕೈಯಲ್ಲಿರುವುದು ಆಘಾತಕಾರಿ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ದೆಹಲಿಯ ಜವಾಹರ್ ಭವನದಲ್ಲಿ ನಡೆದ ದಿ ದಲಿತ್ ಟ್ರುತ್ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಸ್ಪೃಶ್ಯತೆಯ ಹೆಸರಿನಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೇರಿದ ದಿನದಿಂದ ಸಂವಿಧಾನವನ್ನು ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಬಿಜೆಪಿಯ ವಿರುದ್ಧ ಧ್ವನಿಯೆತ್ತಿದವರನ್ನು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಧಮನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.