ಬಿಹಾರ: ಅಧಿಕಾರಿಗಳ ಸೋಗಿನಲ್ಲಿ ಬಂದು ಸೇತುವೆಯನ್ನೇ ಕದ್ದೊಯ್ದ ಖದೀಮರು!

Prasthutha|

ಬಿಹಾರ: ಬಿಹಾರದ ರೊಹತಾಸ್ ಜಿಲ್ಲೆಯ ನಸ್ರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮಿಯಾವಾರ್ ಎಂಬಲ್ಲಿ 60 ಅಡಿ ಉದ್ದದ ಸೇತುವೆಯನ್ನೇ ದರೋಡೆ ಮಾಡಿದ ವಿಚಿತ್ರ ಪ್ರಕರಣವೊಂದು ನಡೆದಿದೆ.

- Advertisement -

50 ವರ್ಷ ಹಳೆಯದಾದ 60 ಅಡಿ ಉದ್ದದ ಇಡೀ ಸೇತುವೆಯನ್ನು ಹಾಡಹಗಲೇ ನೆಲಸಮ ಮಾಡಿ ಅಲ್ಲಿದ್ದ ಕಬ್ಬಿಣವನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಗ್ರಾಮಸ್ಥರು ಮತ್ತು ಆಡಳಿತ ವರ್ಗ ಆಶ್ಚರ್ಯಚಕಿತವಾಗಿದೆ. ಕಳ್ಳರು ತಮ್ಮನ್ನು ನೀರಾವರಿ ಇಲಾಖೆ ಅಧಿಕಾರಿಗಳು ಎಂದು ಹೇಳಿಕೊಂಡು ಸೇತುವೆಯ ಮರು ನಿರ್ಮಾಣ ಮಾಡಬೇಕೆಂದು ಇಡೀ ಸೇತುವೆಯನ್ನು ನಿರ್ನಾಮ ಮಾಡಿ ಅದಕ್ಕೆ ಅಳವಡಿಸಲಾಗಿದ್ದ 20 ಟನ್‍ಗೂ ಹೆಚ್ಚು ಕಬ್ಬಿಣವನ್ನು ದೋಚಿದ್ದಾರೆ.

ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಈ ಸೇತುವೆಯನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿರಲಿಲ್ಲ. 50 ವರ್ಷಗಳ ಹಿಂದಿನ ಈ ಸೇತುವೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಕಾಲಕ್ರಮೇಣ ಶಿಥಿಲವಾಗಿದ್ದರಿಂದ ಪರ್ಯಾಯವಾಗಿ ಇನ್ನೊಂದು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಇದು ವ್ಯರ್ಥವಾಗಿತ್ತು. ಈ ಸೇತುವೆಯನ್ನು ತೆರವುಮಾಡಲು ಜನರು ಕೂಡ ಆಡಳಿತಾಧಿಕಾರಿಗಳಿಗೆ ಅರ್ಜಿ ಬರೆದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ದರೋಡೆಕೋರರು ಸೇತುವೆಯನ್ನು ಧ್ವಂಸ ಮಾಡಿ ಕಬ್ಬಿಣವನ್ನು ಕದ್ದೊಯ್ದಿದ್ದಾರೆ. ಸೇತುವೆಯನ್ನು ಕೆಡವಿ ಕಬ್ಬಿಣವನ್ನು ಹಲವು ದಿನಗಳ ಕಾಲ ಸಾಗಣೆ ಮಾಡಿದ್ದಾರೆ. ಕಣ್ಣ ಮುಂದೆಯೇ ಕಳ್ಳತನ ನಡೆಯುತ್ತಿದ್ದರೂ ಗುರುತಿಸಲಾಗದ ಜನ ಮೂಕ ಪ್ರೇಕ್ಷಕರಾಗಿದ್ದರು.

Join Whatsapp