ಬ್ರಹ್ಮೋಸ್ ವೈಫಲ್ಯ! ರಾಯಭಾರಿಯನ್ನು ಕರೆಸಿದ ಮನಿಲಾ ಖರೀದಿದಾರ

Prasthutha|

ಮನಿಲಾ: ಅಧ್ಯಕ್ಷ ರಾಡ್ರಿಗೋ ದುತೆರ್ತೆ ಅವರ ಪಿಲಿಪ್ಪೀನ್ಸ್ ಸಂಪುಟದ ಹಿರಿಯರಲ್ಲೊಬ್ಬರಾದ ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಜಾನಾರು ಮನಿಲಾದಲ್ಲಿ ಭಾರತೀಯ ರಾಯಭಾರಿ ಶಂಭು ಎಸ್. ಕುಮರನ್ ರನ್ನು ಕರೆಸಿಕೊಂಡು ಮಾತನಾಡಿದರು.

- Advertisement -

ಭಾರತದ ಬ್ರಹ್ಮೋಸ್ ಕ್ಷಿಪಣಿಯೊಂದು ಆಕಸ್ಮಿಕವಾಗಿ ಪಾಕಿಸ್ತಾನದೊಳಕ್ಕೆ ಹೋಗಿ ಬಿದ್ದಾಗ ಕೂಡ ಯಾಕೆ ಹಾಗಾಯಿತು ಎಂಬ ಪ್ರಶ್ನೆ ಎದುರಾದಾಗ ಭಾರತ ಅದಕ್ಕೆ ವಿವರಣೆ ನೀಡಿತ್ತು.

ಪಿಲಿಪ್ಪೀನ್ಸ್ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಕೊಂಡುಕೊಳ್ಳುತ್ತದೆ. ಅದರಲ್ಲಿ ಒಂದು ವಿಫಲವಾದ ಕಾರಣ ರಾಯಭಾರಿಗಳ ಜೊತೆ ರಕ್ಷಣಾ ಕಾರ್ಯದರ್ಶಿ (ಸಚಿವ) ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

- Advertisement -

ಬ್ರಹ್ಮೋಸ್ ಬ್ಯಾಟರಿಯನ್ನು ಡಿಆರ್ ಡಿಓ- ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ರಷ್ಯಾದ ಎನ್ ಪಿಓ ಮೆಶಿನೋಸ್ತ್ರೋಯೆನಿಯಾ ಜಂಟಿಯಾಗಿ ತಯಾರಿಸಿದ್ದು. ಇದೇ ಜನವರಿ 28ರಲ್ಲಿ ಪಿಲಿಪ್ಪೀನ್ಸ್ ಈ ಬ್ಯಾಟರಿಗಳ ಖರೀದಿಗೂ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.

375 ಮಿಲಿಯ ಡಾಲರ್ ಮೌಲ್ಯದ ಖರೀದಿ ಒಪ್ಪಂದವು ಭಾರತದ ರಕ್ಷಣಾ ವಸ್ತು ಮಾರಾಟದಲ್ಲಿ ಒಂದು ದೊಡ್ಡ ಮೈಲಿಗಲ್ಲು.

“ಇದು ಒಂದು ವಿಚಾರಣೆ ಅಷ್ಟೆ. ಈ ಬಗ್ಗೆ ನಾನು ಅವರಿಗೆ ಎಲ್ಲ ತಾಂತ್ರಿಕ ಮಾಹಿತಿಗಳನ್ನು ಒದಗಿಸಿದ್ದೇನೆ” ಎಂದು ರಾಯಭಾರಿ ಕುಮರನ್ ಹೇಳಿದ್ದಾರೆ.

ಬ್ರಹ್ಮೋಸ್ ಕ್ಷಿಪಣಿಯನ್ನು ರಷ್ಯಾದ ಜೊತೆ ತಾಂತ್ರಿಕ ಒಪ್ಪಂದ ಮಾಡಿಕೊಂಡು ತಯಾರಿಸಲಾಗುತ್ತಿದೆ. ಇದು ನಂಬಿಕಾರ್ಹವಾಗಿ ಕೆಲಸ ಮಾಡುತ್ತಿದೆ ಎಂದೂ ಅವರು ಹೇಳಿದರು.

ಪಾಕಿಸ್ತಾನದ 124 ಕಿಮೀ ಒಳಗೆ ಖಾನ್ವೇಲ್ ಜಿಲ್ಲೆಯ ಮಿಯಾನ್ ಚಾನು ಬಳಿ ಭಾರತದ ಸಿರ್ಸಾ ಬಳಿಯಿಂದ ಹಾರಿದ ಬ್ರಹ್ಮೋಸ್ ಒಂದು ಮಾರ್ಚ್ 10ರಂದು ಬಿದ್ದಿತ್ತು. ಇದು ಬ್ರಹ್ಮೋಸ್ ವಿಫಲತೆಯೇ ಎಂಬುದು ಕೂಡ ಪಿಲಿಪ್ಪೀನ್ಸ್ ಪ್ರಶ್ನೆಯಾಗಿತ್ತು.

ಅದನ್ನು ಆಕಸ್ಮಿಕ ಎಂದು ವಿವರಿಸಿರುವ ಭಾರತ ಅದನ್ನು ಅಲ್ಲಿಗೇ ಕೈಬಿಟ್ಟಿಲ್ಲ. ಆ ಬಗೆಗೆ ಉನ್ನತ ಮಟ್ಟದ ನ್ಯಾಯಾಲಯದ ತನಿಖೆಯನ್ನು ನಡೆಸಿದೆ.



Join Whatsapp