ಕರ್ನಾಟಕ । ಮಾವು ವ್ಯಾಪಾರಕ್ಕೂ ಕಾಲಿಟ್ಟ ಕೋಮು ಬಹಿಷ್ಕಾರ

Prasthutha|

ಬೆಂಗಳೂರು: ಹಿಜಾಬ್ ಸಂಘರ್ಷ, ಹಲಾಲ್ ಮಾಂಸ, ಭಗವದ್ಗೀತೆ, ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಯನ್ನು ವಿವಾದವಾಗಿಸಿದ ಬಳಿ ಸಂಘಪರಿವಾರ ಇದೀಗ, ಮಾವಿನ ಹಣ್ಣು ವ್ಯಾಪಾರ ನಡೆಸುತ್ತಿರುವ ಮುಸ್ಲಿಮರನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ.

- Advertisement -

ರಖಂ ಮಾವು ಮಾರುಕಟ್ಟೆಯನ್ನು ಹಿಂದೂಗಳ ತೆಕ್ಕೆಗೆ ಒಪ್ಪಿಸುವಂತೆ ಶ್ರೀರಾಮ ಸೇನೆಯ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳು ಉತ್ತಮ ತಳಿಯ ಮಾವುಗಳನ್ನು ಮುಸ್ಲಿಮ್ ವ್ಯಾಪಾರಿಗಳು ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ ಮತ್ತು ಮಾವು ಮಾರುಕಟ್ಟೆಗಳನ್ನು ಮುಸ್ಲಿಮ್ ವ್ಯಾಪಾರಿಗಳು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಹಿಂದೂ ಮಾವು ಬೆಳೆಗಾರರ ಏಳಿಗೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ರಖಂ ಮಾರುಕಟ್ಟೆಯನ್ನು ಹಿಂದೂಗಳ ತೆಕ್ಕೆಗೆ ಒಪ್ಪಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

- Advertisement -

ನಾವು ಮುಸ್ಲಿಮರು ವ್ಯಾಪಾರ ನಡೆಸದಂತೆ ಸೂಚಿಸುವುದಿಲ್ಲ. ಆದರೆ ಹಿಂದೂ ಯುವಕರು ಮಾವು ವ್ಯಾಪಾರ ವಹಿವಾಟಿನಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಿದ್ದೇವೆ. ಸರಕುಗಳ ಬೆಲೆಗಳನ್ನು ಮುಸ್ಲಿಮರು ನಿರ್ಧರಿಸಬಾರದೆಂದು ಕೋಲಾರ ಜಿಲ್ಲಾ ಮಾವು ಬೆಳೆಗಾರ ಸಹಕಾರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

Join Whatsapp