ಅಮರಾವತಿ: ಆಂಧ್ರಪ್ರದೇಶವು ಸೋಮವಾರ ರಾಜ್ಯದ ಹೊಸ ಆಡಳಿತಾತ್ಮಕ ನಕ್ಷೆಯನ್ನು ರಚಿಸಿದ್ದು, 13 ಹೊಸ ಜಿಲ್ಲೆಗಳ ರಚನೆಯೊಂದಿಗೆ ಒಟ್ಟು ಜಿಲ್ಲೆಗಳ ಸಂಖ್ಯೆ 26 ಕ್ಕೆ ಹೆಚ್ಚಿಸಲಾಗಿದೆ.
ಮುಖ್ಯ ಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸೋಮವಾರ ಬೆಳಿಗ್ಗೆ 13 ಹೊಸ ಜಿಲ್ಲೆಗಳನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಹೊಸ ಜಿಲ್ಲೆಗಳ ರಚನೆ ರಾಜ್ಯದ ಎಲ್ಲಾ ಪ್ರದೇಶಗಳ ಅಭಿವೃದ್ಧಿಗೆ ಸುಲಭವಾಗಲು ನೂತನ ಹೆಜ್ಜೆಯಾಗಿದೆ. ಸಣ್ಣ ಜಿಲ್ಲೆಗಳ ರಚನೆಯಿಂದ ಜಿಲ್ಲಾ ಕೇಂದ್ರದಿಂದ ಆಸುಪಾಸಿನ ಗ್ರಾಮಗಳಿಗೆ ದೂರ ಕಡಿಮೆಯಾಗುತ್ತದೆ. ಜಿಲ್ಲಾಡಳಿತ ಜನರಿಗೆ ಹತ್ತಿರವಾಗುತ್ತದೆ. ಸರ್ಕಾರ ಜನರಿಗೆ ಹತ್ತಿರವಾದಂತೆ ಹೊಣೆಗಾರಿಕೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಶ್ರೀ ಬಾಲಾಜಿ, ಅನ್ನಮಯ್ಯ, ಶ್ರೀ ಸತ್ಯಸಾಯಿ, ನಂದ್ಯಾಲ, ಬಾಪಟ್ಲ, ಪಲ್ನಾಡು, ಏಲೂರು, ಎನ್‌ಟಿಆರ್, ಅನಕಾಪಲ್ಲಿ, ಕಾಕಿನಾಡ, ಕೋನಾ ಸೀಮಾ, ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು ನೂತನ ಜಿಲ್ಲೆಗಳಾಗಿದೆ.