ಮಡಿಕೇರಿ| ಹುಲಿಯ ಪಳೆಯುಳಿಕೆ ಮಾರಾಟ ಯತ್ನ; ಆರೋಪಿಗಳ ಬಂಧನ

Prasthutha|

ಕೊಡಗು: ಅಕ್ರಮವಾಗಿ ಹುಲಿಯುಗುರು ಮತ್ತು ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಭೇದಿಸಿದ ಅರಣ್ಯ ಘಟಕ ಸಿಐಡಿ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ ಘಟನೆ ಕುಶಾಲನಗರ ತಾಲೂಕಿನ ಹೆಬ್ಬಾಲೆ ಮರೂರು ಗ್ರಾಮದಲ್ಲಿನಡೆದಿದೆ.

- Advertisement -

ಬಂಧಿತ ಆರೋಪಿಗಳನ್ನು ಗಣೇಶ, ಯೋಗೇಶ, ರಮೇಶ, ದೊರೇಶ, ನಟೇಶ, ನವೀನ್ ಹಾಗೂ ಶೇಖರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು 17 ಹುಲಿಯುಗುರುಗಳು, 1 ಕೋರೆ ಹಲ್ಲು, 6 ಹಲ್ಲಿನ ಚೂರುಗಳು, ಚರ್ಮ, 2 ಹಲ್ಲುಗಳು, ಬೆನ್ನು ಮೂಳೆ, ಎರಡು ಪಕ್ಕೆಲುಬು, 4 ಕಾಲಿನ ಮೂಳೆಗಳು ಮತ್ತು ವಿವಿಧ ಅಳತೆಯ 55 ಮೂಳೆಗಳು ಮತ್ತು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ವರ್ಷದ ಹಿಂದೆ ಗಣೇಶ ಮತ್ತು ಯೋಗೇಶ್ ಎಂಬವರ ಜಮೀನಿನಲ್ಲಿ ಕಾಡು ಹಂದಿಯ ಕಾಟ ತಪ್ಪಿಸಲು ಹಾಕಿದ್ದ ವಿದ್ಯುತ್ ತಂತಿಯ ಶಾಕ್ನಿಂಗದ ಹುಲಿಯೊಂದು ಮೃತಪಟ್ಟಿತ್ತು. ಅದನ್ನು ರಮೇಶ ಹೊಲದಲ್ಲಿ ಗುಂಡಿ ತೆಗೆದು ಮುಚ್ಚಿ ಹಾಕಿದ್ದರು. ನಂತರ ಆರೋಪಿಗಳು ಅದೇ ರಾತ್ರಿ, ಮಣ್ಣು ತೆಗೆದು ಹುಲಿಯ ಮೃತ ದೇಹದಿಂದ ಕಾಲಿನ ಉಗುರುಗಳು, ಹಲ್ಲುಗಳು ಮತ್ತು ಚರ್ಮವನ್ನುತೆಗೆದಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.




Join Whatsapp