IMA ವಂಚನೆ ಪ್ರಕರಣ: ರೋಷನ್ ಬೇಗ್ ಗೆ ಸೇರಿದ ನಾಲ್ಕು ಐಷರಾಮಿ ಕಾರು ಜಪ್ತಿ

Prasthutha|

ಬೆಂಗಳೂರು: ರಾಜ್ಯದ ಬಹುಕೋಟಿ ಹಗರಣಗಳಲ್ಲಿ ಒಂದಾದಂತ ಐಎಎಂ ವಂಚನೆ ಪ್ರಕರದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಗೆ ಸಿಬಿಐ ಬಿಗ್ ಶಾಕ್ ನೀಡಿದೆ. ಅವರಿಗೆ ಸೇರಿದ ನಾಲ್ಕು ಕಾರುಗಳನ್ನು ಜಪ್ತಿ ಮಾಡಿ, ಶಾಕ್ ನೀಡಿದೆ.

- Advertisement -

ಐಎಎಂ ಜ್ಯುವೆಲರಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರು, ಸಾರ್ವಜನಿಕರಿಗೆ ಐಎಎಂನಲ್ಲಿ ದುಪ್ಪಟ್ಟು ಲಾಭಾಂಶ ಕೊಡೋದಾಗಿ ಪ್ರಚಾರ ಮಾಡಿರೋದಾಗಿ ತನಿಖೆಯಲ್ಲಿ ದೃಢಪಟ್ಟಿದೆ. ಹೀಗೆ ಪ್ರಚಾರ ಮಾಡಿ ಜನರಿಗೆ ಹಣ ಹೂಡಿಕೆ ಮಾಡುವಂತೆ ತಿಳಿಸಿ, ಜನರನ್ನು ದಾರಿ ತಪ್ಪಿಸಿರೋದಾಗಿಯೂ ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಹಿನ್ನಲೆಯಲ್ಲಿಯೇ ಈಗಾಗಲೇ ರೋಷನ್ ಬೇಗ್ ಸೇರಿದಂತೆ ಚರಾಸ್ತಿ ಜಪ್ತಿಗೂ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಆದೇಶದಂತೆ ಐಎಎಂ ಬಹುಕೋಟಿ ವಂಚನೆ ಪ್ರಕರಣದಲ್ಲಿ, ಮಾಜಿ ಸಚಿವ ರೋಷನ್ ಬೇಗ್ ಸೇರಿದಂತೆ 4 ಕಾರುಗಳನ್ನು ಜಪ್ತಿ ಮಾಡಿದೆ. ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು, ಅವರಿಗೆ ಸೇರಿದ್ದಂತ 4 ಕಾರುಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp