ಪ್ರಾಣಿಗಳ ತಲೆಗೆ ಹೊಡೆದು ಪ್ರಜ್ಞೆ ತಪ್ಪಿಸಿದ ಬಳಿಕವಷ್ಟೇ ವಧೆ ಮಾಡಬೇಕು: ಪಶುಸಂಗೋಪನಾ ಇಲಾಖೆಯಿಂದ ಮತ್ತೊಂದು ಆದೇಶ

Prasthutha|

ಬೆಂಗಳೂರು: ಹಲಾಲ್ ಕಟ್ ಮಾಂಸವನ್ನು ವಿವಾದವಾಗಿಸಿದ ಬೆನ್ನಿಗೇ ಮಾಂಸಕ್ಕಾಗಿ ಪ್ರಾಣಿಗಳ ವಧೆ ಹೇಗೆ ಮಾಡಬೇಕು ಎಂದು  ಪಶುಸಂಗೋಪನಾ ಇಲಾಖೆಯೊಂದು ವಿವಾದಾತ್ಮಕ ಆದೇಶ ಹೊರಡಿಸಿದೆ.

- Advertisement -

ಇನ್ನು ಮುಂದೆ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿ, ಪಕ್ಷಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಸ್ಟನ್ನಿಂಗ್ (ಪ್ರಾಣಿಗಳ ತಲೆಗೆ ಹೊಡೆದು ಪ್ರಜ್ಞೆ ತಪ್ಪಿಸುವುದು) ಮಾಡುವುದು ಕಡ್ಡಾಯಗೊಳಿಸಿ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.

ಸ್ಟನ್ನಿಂಗ್ ಎಂದರೆ ಮಾಂಸಕ್ಕಾಗಿ ಪ್ರಾಣಿಗಳನ್ನು ವಧೆ ಮಾಡುವ ಮೊದಲು ಪ್ರಾಣಿಗಳ ತಲೆಗೆ ಜೋರಾಗಿ ಹೊಡೆಯುವುದು. ಹೀಗೆ ಮಾಡಿ ಪ್ರಜ್ಞೆ ತಪ್ಪಿಸಿ ಬಳಿಕವಷ್ಟೇ ವಧೆ ಮಾಡಬೇಕೆಂದು ತಿಳಿಸಲಾಗಿದೆ. ಹೀಗೆ ಪ್ರಜ್ಞೆ ತಪ್ಪಿಸಿ ಪ್ರಾಣಿಗಳನ್ನು ಸಾಯಿಸುವಾಗ ಅವುಗಳಿಗೆ ನೋವು ತಿಳಿಯುವುದಿಲ್ಲ ಎನ್ನುವುದು ಒಂದು ವಾದ.  ತಲೆಗೆ ಬಲವಾದ ಪೆಟ್ಟು ಬಿದ್ದು ಅವುಗಳ ಮೆದುಳು ನಿಷ್ಕ್ರಿಯಗೊಳ್ಳುತ್ತದೆ. 

- Advertisement -

ಈಗಾಗಲೇ ಕೋಳಿ, ಕುರಿ ಮುಂತಾದ ಮಾಂಸದ ಅಂಗಡಿಗಳಿಗೆ ಪಶು ಸಂಗೋಪನಾ ಇಲಾಖೆ  ಖಡಕ್ ಸೂಚನೆ ನೀಡಿದೆ. ಯಾವುದೇ ಮಾಂಸದ ಅಂಗಡಿಗಳಲ್ಲಿ ಇದನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾಗಿದೆ. ಇನ್ನು ಮುಂದೆ ಕೋಳಿ, ಕುರಿ ಅಂಗಡಿಗಳಿಗೆ ಲೈಸೆನ್ಸ್ ಕೊಡುವಾಗಲೂ ಸ್ಟನ್ನಿಂಗ್ ವ್ಯವಸ್ಥೆ ಕಡ್ಡಾಯವಾಗಿ ಇರಲೇಬೇಕಾಗಿದೆ.

ಪಶುಸಂಗೋಪನಾ ಇಲಾಖೆ ಆದೇಶವನ್ನು ಎಲ್ಲಾ ಮಾಂಸದ ಅಂಗಡಿಗಳೂ ಕಡ್ಡಾಯವಾಗಿ ಪಾಲಿಸಲೇ ಬೇಕು. ಸ್ಟನ್ನಿಂಗ್ ಫೆಸಿಲಿಟಿ ಇಲ್ಲದೆ ಹೋದರೆ ಪರವಾನಗಿ ನೀಡುವಂತಿಲ್ಲ. 2001 ರ ಕಾಯ್ದೆಯ ಸೆಕ್ಷನ್ 6 ಮತ್ತು 4 ರ ಅಡಿಯಲ್ಲಿ ಈ ನಿಯಮ ಇದೆ.

ನಿಯಮ ಬ್ರೇಕ್ ಮಾಡುವವರಿಗೆ 1960 ಆಕ್ಟ್ ಪ್ರಕಾರ 5 ಸಾವಿರದಿಂದ 50 ಸಾವಿರದವರೆಗೂ ದಂಡ ವಿಧಿಸಲಾಗುವುದು ಎಂದು ಸೂಚನೆ ಕೊಡಲಾಗಿದೆ. ಆಕ್ಟ್ ಅಡಿಯಲ್ಲಿ ಪ್ರಾಣಿ ಹಿಂಸೆಯ ಕೇಸ್ ಕೂಡಾ ದಾಖಲು ಮಾಡಲಾಗುವುದು ಎಂದೂ ಎಚ್ಚರಿಸಲಾಗಿದೆ.



Join Whatsapp