ರಷ್ಯಾದ ಇಂಧನ ಸಂಗ್ರಹಾಗಾರದ ಮೇಲೆ ಉಕ್ರೇನ್‌ ದಾಳಿ; ಚರ್ನೋಬಿಲ್‌ ಅಣು ವಿದ್ಯುತ್‌ ಸ್ಥಾವರವನ್ನು ಉಕ್ರೇನ್ ಗೆ ಬಿಟ್ಟುಕೊಟ್ಟ ರಷ್ಯಾ

Prasthutha|

ಕೀವ್‌: ಉಕ್ರೇನ್‌-ರಷ್ಯಾ ಯುದ್ಧ ಪ್ರಾರಂಭವಾಗಿ 37 ದಿನಗಳು ಕಳೆದವು. ಈವರೆಗೆ ದಾಳಿಗೆ ತುತ್ತಾಗಿದ್ದ ಉಕ್ರೇನ್  ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್‌ ಮೂಲಕ ರಷ್ಯಾದ ಮೇಲೆ ದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಈ ಬೆಳವಣಿಗೆಯು ಎರಡೂ ದೇಶಗಳ ನಡುವಿನ ಸಂಧಾನ ಮಾತುಕತೆಗೆ ಅಡ್ಡಿ ಉಂಟುಮಾಡಲಿದೆ ಎಂದು ರಷ್ಯಾ ಎಚ್ಚರಿಸಿದೆ.

ರಷ್ಯಾದ ಪಶ್ಚಿಮದಲ್ಲಿರುವ ಇಂಧನ ಸಂಗ್ರಹಾಗಾರದ ಮೇಲೆ ಉಕ್ರೇನ್‌ ದಾಳಿ ನಡೆಸಿದೆ ಎಂದು ರಷ್ಯಾದ ಪ್ರಾದೇಶಿಕ ಗವರ್ನರ್‌ ತಿಳಿಸಿದ್ದಾರೆ. ಯುದ್ಧ ಆರಂಭವಾದ ಅಂದಿನಿಂದ ರಷ್ಯಾ ನೆಲದ ಮೇಲೆ ವೈಮಾನಿಕ ದಾಳಿಯಾಗಿರುವುದು ಇದೇ ಮೊದಲ ಬಾರಿ.

- Advertisement -

ಇದರಿಂದ ತೈಲ ಸಂಗ್ರಹಾಗಾರದಲ್ಲಿದ್ದ ಇಬ್ಬರು ಸಿಬಂದಿ ಗಾಯಗೊಂಡಿದ್ದಾರೆ. 170 ಅಗ್ನಿಶಾಮಕ ಸಿಬಂದಿ ಬೆಂಕಿ ನಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಅಚ್ಚರಿಯ ಬೆಳವಣಿಗೆ ಎಂಬಂತೆ ಕಳೆದೊಂದು ತಿಂಗಳಿಂದ ರಷ್ಯಾ ಪಡೆ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಚರ್ನೋಬಿಲ್‌ ಅಣು ವಿದ್ಯುತ್‌ ಸ್ಥಾವರವನ್ನು ಉಕ್ರೇನ್ ಗೆ ಬಿಟ್ಟುಕೊಟ್ಟಿದೆ.



Join Whatsapp