ರಸೆಲ್ ಸ್ಪೋಟಕ ಬ್ಯಾಟಿಂಗ್ | ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕೆಕೆಆರ್

Prasthutha|

ಮುಂಬೈ: ಐಪಿಎಲ್ 15ನೇ ಆವೃತ್ತಿಯ ತನ್ನ ಎರಡನೇ ‌ಪಂದ್ಯದಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್, ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್ ಗಳ ಅಂತರದಲ್ಲಿ ಮಣಿಸಿದೆ.
ಟಾಸ್ ಸೋತು ಬ್ಯಾಟಿಂಗ್’ಗಿಳಿದ ಪಂಜಾಬ್ 18.2 ಓವರ್‌ಗಳಲ್ಲಿ 137 ರನ್’ಗಳಿಗೆ ಆಲೌಟ್ ಆಯಿತು. ಸುಲಭ ಗುರಿಯನ್ನು ಕೇವಲ 14.3 ಓವರ್‌ಗಳಲ್ಲಿ, 4 ವಿಕೆಟ್ ಕಳೆದುಕೊಂಡು ಚೇಸ್ ಮಾಡಿದ ಶ್ರೇಯಸ್ ಅಯ್ಯರ್ ಪಡೆ, ಸತತ ಎರಡನೇ ಗೆಲುವಿನ ಸಂಭ್ರವನ್ನಾಚರಿಸಿತು.
ಕೆಕೆಆರ್ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ದೈತ್ಯ ಆಂಡ್ರೆ ರಸೆಲ್, 31 ಎಸೆತಗಳನ್ನು ಎದುರಿಸಿ, 8 ಅಮೋಘ ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 70 ರನ್ ಗಳಿಸಿ ಅಜೇಯರಾಗುಳಿದರು.
ಕ್ಯಾಪ್ಟನ್ ಶ್ರೇಯಸ್ ಅಯ್ಯರ್ 26 ಮತ್ತು ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ 24 ರನ್ ಗಳಿಸಿದರು.

- Advertisement -

137 ರನ್ ಗಳಿಗೆ ಪಂಜಾಬ್ ಸರ್ವ ಪತನ !
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ , ಉಮೇಶ್ ಯಾದವ್ ಬಿಗು ಬೌಲಿಂಗ್ ದಾಳಿಗೆ ಸಿಲುಕಿ ರನ್ ಗಳಿಸಲು ಒದ್ದಾಡಿತು. 4 ಓವರ್‌ಗಳನ್ನು ಎಸೆದ ಯಾದವ್, 23 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದರು. ಟಿಮ್ ಸೌಥಿ 2 ವಿಕೆಟ್ ಪಡೆದರು.

ಪಂಜಾಬ್ ಪರ ಕೇವಲ 9 ಎಸೆತಗಳನ್ನು ಎದುರಿಸಿ ತಲಾ 3 ಸಿಕ್ಸರ್ ಮತ್ತು ಬೌಂಡರಿಗಳ ನೆರವಿನಿಂದ 31 ಸಿಡಿಸಿದ ಭನುಕ ರಜಪಕ್ಷ ಟಾಪ್ ಸ್ಕೋರರ್ ಎನಿಸಿದರು.

Join Whatsapp