ನೋಟ್ ಬ್ಯಾನ್ ಆಗುತ್ತಿದ್ದಂತೆ ಶಾ ನಿರ್ದೇಶಕನಾಗಿದ್ದ ಬ್ಯಾಂಕ್ ಗೆ 500 ಕೋ.ರೂ. ಜಮೆ; ಹಣದ ಮೂಲ ಬಹಿರಂಪಡಿಸಲು ಸಿದ್ದು ಒತ್ತಾಯ

Prasthutha|

ಬೆಂಗಳೂರು: ನೋಟು ಬ್ಯಾನ್ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶಕರಾಗಿದ್ದ ಎಡಿಸಿ ಬ್ಯಾಂಕ್ ರೂ.500 ಕೋಟಿ ಜಮೆ ಆಗಿರುವ ಬಗ್ಗೆ ಶಾ ಅವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- Advertisement -

ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಅವರನ್ನು ಉದ್ದೇಶಿಸಿ ನೇರವಾಗಿ ಪ್ರಶ್ನಿಸಿರುವ ಅವರು, ನೀವು ನಿರ್ದೇಶಕರಾಗಿದ್ದ ಎಡಿಸಿ ಬ್ಯಾಂಕ್‌ಗೆ ಜಮೆಯಾಗಿರುವ ಹಣದ ಬಗ್ಗೆ ಸಹಕಾರ ಸಮ್ಮೇಳನದಲ್ಲಿ ಬಹಿರಂಗಪಡಿಸುತ್ತೀರಾ? ಎಂದು ಕೇಳಿದ್ದಾರೆ.

ಅಲ್ಲದೇ, ಕೃಷಿ ಕಾನೂನುಗಳನ್ನು ಹಿಂಪಡೆಯುವ ಮೂಲಕ ಕೇಂದ್ರ ಸರ್ಕಾರ ರೈತರಿಗೆ ತಲೆಬಾಗಿದೆ. ಆದರೆ, ರಾಜ್ಯ ಸರ್ಕಾರವೇಕೆ ಅದನ್ನು ಮಾಡುತ್ತಿಲ್ಲ? ಕೇಂದ್ರ ಸರ್ಕಾರ ಮಾತ್ರ ಕಾನೂನನ್ನು ಹಿಂಪಡೆದು, ರಾಜ್ಯ ಸರ್ಕಾರಗಳು ಈ ರೀತಿ ಮೊಂಡುತನ ಪ್ರದರ್ಶಿಸುವುದು ನಿಮ್ಮ ಯೋಜನೆಯಾಗಿತ್ತೇ? ಈ ಮೂಲಕ ರೈತರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.  



Join Whatsapp