ಸೌದಿ ಅರೇಬಿಯಾದಲ್ಲಿ ನಾಳೆ ರಮಝಾನ್ ಉಪವಾಸ ಆರಂಭ

Prasthutha|

ಜಿದ್ದಾ: ಸೌದಿ ಅರೇಬಿಯಾದಲ್ಲಿ  ರಮಝಾನ್ ತಿಂಗಳ ಚಂದ್ರ ದರ್ಶನ ಆಗಿರುವುದರಿಂದ ನಾಳೆಯಿಂದ(ಶನಿವಾರ) ಉಪವಾಸ ಆರಂಭಗೊಳ್ಳಲಿದೆ ಎಂದು ಸೌದಿ ಗೆಝೆಟ್ ತಿಳಿಸಿದೆ.

- Advertisement -

ಸೌದಿ ಆರೇಬಿಯಾದ ಸುದೈರ್ ಎಂಬಲ್ಲಿ ಶುಕ್ರವಾರ ರಾತ್ರಿ ಚಂದ್ರದರ್ಶನವಾಗಿದೆ. ಇಂದು ರಾತ್ರಿ ಹರಮೈನ್ ನಲ್ಲಿ ತರಾವೀಹ್ ನಡೆಯಲಿದೆ ಎಂದು ಹರಮೈನ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಯುಎಇ, ಬಹ್ರೈನ್, ಕತಾರ್, ಕುವೈಟ್ ನಲ್ಲೂ ಏಪ್ರಿಲ್ 2ರಿಂದ ಉಪವಾಸ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

- Advertisement -

Join Whatsapp