ಬೆಂಗಳೂರು: ಏಪ್ರಿಲ್ 1 ಹೊಸ ಆರ್ಥಿಕ ವರ್ಷದ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಹಲವು ವಸ್ತುಗಳ ಬೆಲೆಯನ್ನು ಏರಿಸಲಾಗಿದೆ.
ನೋವು ನಿವಾರಕಗಳು, ಆ್ಯಂಟಿ ವೈರಸ್ ಗಳು ಸೇರಿದಂತೆ ಅನೇಕ ಔಷಧಗಳ ಬೆಲೆಯನ್ನು ಶೇ. 10 ರಷ್ಟು ಏರಿಕೆಗೆ ಸರ್ಕಾರ ಅನುಮೋದನೆ ನೀಡಿದೆ.
ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಮಾಡಲಾಗಿದೆ. ಇಂದಿನಿಂದ 19 ಕೆಜಿಯ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆ 250 ರೂ. ಏರಿಕೆ ಮಾಡಲಾಗಿದೆ.
ಪಿಎಫ್ ಮೇಲೆ ತೆರಿಗೆ ಹೆಚ್ಚಿಸಲಾಗಿದ್ದು, 2.50 ಲಕ್ಷ ರೂ. ಮೀರುವ ಪಿಎಫ್ ಖಾತೆಗಳಿಗೆ ಇನ್ನು ಮುಂದೆ ಸರ್ಕಾರ ತೆರಿಗೆ ವಿಧಿಸಲಿದೆ.
ಹೊಸ ಬೈಕು ಅಥವಾ ಕಾರು ಖರೀದಿ ದುಬಾರಿಯಾಗಿದೆ. ಥರ್ಡ್ ಪಾರ್ಟಿ ಮೋಟಾರ್ ಮಿಮೆಯನ್ನು ಹೆಚ್ಚಿಸುವುದಾಗಿ ರಸ್ತೆ ಮತ್ತು ಸಾರಿಗೆ ಸಚಿವಾಲಯ ಘೋಷಿಸಿದೆ. ಕಾರು ಬೈಕು ಕೊಳ್ಳಲು ಶೇ. 17 ರಿಂದ 23 ರಷ್ಟು ಹೆಚ್ಚುವರಿ ಹಣ ನೀಡಬೇಕಾಗುತ್ತದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಐ) ಟೋಲ್ ತೆರಿಗೆಯನ್ನು ಶೇ10 ರಿಂದ 25 ರವರೆಗೆ ಹೆಚ್ಚಳ ಮಾಡಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸಣ್ಣ ವಾಹನಗಳಿಗೆ 10-15 ರೂ., ವಾಣಿಜ್ಯ ವಾಹನಗಳ ಟೋಲ್ ತೆರಿಗೆ 25 ರೂ. ಹೆಚ್ಚಳವಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಪ್ರಯಾಣಿಸುತ್ತಿದ್ದರೆ, ಈಗ ನೀವು ನಿಮ್ಮ ಟೋಲ್ ತೆರಿಗೆಯಾಗಿ ಹೆಚ್ಚು ಹಣ ಪಾವತಿ ಮಾಡಬೇಕಾಗಿದೆ.