ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್, ಕರ್ನಾಟಕ ರಾಜ್ಯ ಘಟಕದ ವತಿಯಿಂದ ಆಯ್ದ ಸದಸ್ಯರಿಗಾಗಿ ‘ಪಂಚಾಯತ್ ರಾಜ್’ ಎಂಬ ವಿಷಯದ ಮೇಲೆ ಆನ್ ಲೈನ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಅಕ್ರಮ್ ಹಸನ್ ಕಾರ್ಯಕ್ರಮದಲ್ಲಿ ಪಂಚಾಯತ್ ವ್ಯವಸ್ಥೆಯ ಕುರಿತು ಮಾಹಿತಿಯನ್ನು ನೀಡಿದರು.
ಪಂಚಾಯತ್ ವ್ಯವಸ್ಥೆ, ಅದರ ಸೌಲಭ್ಯ, ಕೊಡುಗೆಗಳು, ಆಚರಣೆಯಲ್ಲಿರುವ ಮೀಸಲಾತಿ ನೀತಿ, ಸಭೆಗಳು ಮತ್ತು ಅಧಿಕಾರ ಮಿತಿಯ ಕುರಿತು ಅಕ್ರಮ್ ಹಸನ್ ತನ್ನ ಒಂದು ಗಂಟೆಯ ತರಗತಿಯಲ್ಲಿ ವಿವರಿಸಿದರು. ತರಗತಿಯ ನಂತರ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರು ಪಂಚಾಯತ್ ವ್ಯವಸ್ಥೆಯ ಕುರಿತ ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು.
ಐ.ಎಸ್.ಎಫ್ ರಾಜ್ಯಾಧ್ಯಕ್ಷ ಶರೀಫ್ ಜೋಕಟ್ಟೆ, ಐ.ಎಸ್.ಎಫ್ ಬ್ಲಾಕ್ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಮ್ಮಾಮ್, ಖೋಬರ್ ಮತ್ತು ಅಲ್ ಹಸಾದ ಸುಮಾರು 56 ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದರು.
ಐ.ಎಸ್.ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು.