ಕಮಿಷನ್ ಗಾಗಿ ಕಾಂಟ್ರ್ಯಾಕ್ಟರ್ ಗೆ ಕಿರುಕುಳ: ಸಚಿವ ಈಶ್ವರಪ್ಪ ವಿರುದ್ಧ ಪ್ರಧಾನಿಗೆ ದೂರು ನೀಡಿದ ಹಿಂದೂವಾಹಿನಿ

Prasthutha|

ಬೆಂಗಳೂರು: ಕಾಮಗಾರಿಯ 4 ಕೋಟಿ ರೂ.ಗಳ ಬಿಲ್ ಗಳನ್ನು ಕ್ಲಿಯರ್ ಮಾಡಲು ಕಮಿಷನ್ ನೀಡುವಂತೆ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಅವರ ಬೆಂಬಲಿಗರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂವಾಹಿನಿ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ ಕೆ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ.

- Advertisement -

ತಾನು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು, ಕೆ.ಎಸ್.ಈಶ್ವರಪ್ಪ ಅವರ ಆರ್.ಡಿ.ಪಿ.ಆರ್. ಇಲಾಖೆಗೆ ಸೇರಿದ ಅಂದಾಜು 4 ಕೋಟಿ ವೆಚ್ಚದ 108 ಕ್ಕೂ ಹೆಚ್ಚು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ. ಕೆಲಸ ಮುಗಿಸಿ ಒಂದು ವರ್ಷ ಕಳೆದರೂ ಇಂದಿಗೂ ಸಚಿವರಿಂದಾಗಲಿ, ಸಂಬಂಧಪಟ್ಟ ಅಧಿಕಾರಿಗಳಿಂದಾಗಲಿ ನಮಗೆ ಯಾವುದೇ ವರ್ಕ್ ಆರ್ಡರ್ ಅಥವಾ ಒಂದೇ ಒಂದು ರೂಪಾಯಿ ಪಾವತಿಸಿಲ್ಲ. ಹಣವನ್ನು ಬಿಡಗಡೆಮಾಡಲು ಕಮಿಷನ್ ನೀಡುವಂತೆ ಸಚಿವರು ಮತ್ತು ಅವರ ಬೆಂಬಲಿಗರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತೋಷ್ ಕೆ ಪಾಟೀಲ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

“ಮಾಡಿದ ಕೆಲಸದ ಬಿಲ್ ತಕ್ಷಣ ಬಿಡುಗಡೆ ಮಾಡಬೇಕು. ಏಕೆಂದರೆ ನಾವು ಆ ಕೆಲಸಕ್ಕೆ ಸಾಲ ಮಾಡಿ ಹಣವನ್ನು ಖರ್ಚು ಮಾಡಿರುವುದರಿಂದ ನಾವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ನಾವು ಸಾಕಷ್ಟು ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದೇವೆ. ದಯವಿಟ್ಟು ಸಚಿವರು ಅಥವಾ ಕರ್ನಾಟಕ ಆರ್ ಡಿಪಿಆರ್ ಪ್ರಧಾನ ಕಾರ್ಯದರ್ಶಿಗೆ ಬಾಕಿ ಹಣ ಪಾವತಿ ಮಾಡುವಂತೆ ತಾವು ನಿರ್ದೇಶಿಸಬೇಕು. ಬಡ್ಡಿಯ ಮೇಲೆ ಹಣ ನೀಡಿದ ಸಾಲಗಾರರಿಂದ ತೀವ್ರ ಒತ್ತಡವಿದೆ. ಆದ್ದರಿಂದ ಆತ್ಮಹತ್ಯೆ ಅಲ್ಲದೆ ಬೇರೆ ದಾರಿ ಕಾಣುತ್ತಿಲ್ಲ ಎಂದು ಸಂತೋಷ್ ತಮ್ಮ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.



Join Whatsapp