ಉಡುಪಿ: ಉಡುಪಿ ನಗರಸಭೆ ಅಧಿಕಾರಿಗಳು ಶನಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು, ನಗರದ ಜಾಮಿಯಾ ಮಸೀದಿ ಎದುರಿದ್ದ ಎರಡು ಹೊಟೇಲ್ ಗಳನ್ನು ತೆರವುಗೊಳಿಸಿದ್ದಾರೆ.
ಈ ಕಟ್ಟಡದಲ್ಲಿ 2 ಹೋಟೆಲ್ ಗಳಿದ್ದು, ಅವು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಹಲವು ತಿಂಗಳ ಹಿಂದೆಯೇ ಕಟ್ಟಡ ತೆರವುಗೊಳಿಸಲು ನ್ಯಾಯಾಲಯ ಸೂಚಿಸಿದ್ದು, ಅದರಂತೆ ಮಾಲಕರು ನಿನ್ನೆ ರಾತ್ರಿಯೇ ಅಂಗಡಿ ಹೋಟೆಲ್ ಗಳ ಸಾಮಗ್ರಿಗಳನ್ನು ತೆರವುಗೊಳಿಸಿದ್ದರು. ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ ನಗರಸಭೆ ಆಡಳಿತ ಶನಿವಾರ ಬೆಳಗ್ಗೆಯೇ ನೂರಾರು ಪೊಲೀಸರ ಭದ್ರತೆಯೊಂದಿಗೆ ಕಾರ್ಯಾಚರಣೆಗೆ ಇಳಿದಿದೆ.