ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಅವಮಾನ: ಕಲ್ಲಡ್ಕ ಭಟ್ ವಿರುದ್ಧ SDPI ದೂರು

Prasthutha|

ಉಳ್ಳಾಲ: ಕುತ್ತಾರಿನಲ್ಲಿ ವಿಶ್ವ ಹಿಂದೂ ಪರಿಷತ್ ಏರ್ಪಡಿಸಿದ್ದ ನಮ್ಮ ನಡೆ ಕೊರಗಜ್ಜ ಕ್ಷೇತ್ರದ ಕಡೆ ಕಾರ್ಯಕ್ರಮದಲ್ಲಿ ತ್ರಿವರ್ಣ ಬದಲಾಯಿಸಿ ಕೇಸರಿ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡುತ್ತೇವೆ ಮತ್ತು ಜನಗಣಮನವನ್ನು ಬದಲಾಯಿಸಿ ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡುತ್ತೇವೆ ಎಂದು ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಹೀಯಾಳಿಸಿ ರಾಷ್ಟ್ರದ್ರೋಹವೆಸಗಿರುವ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಮುನ್ನೂರು ಗ್ರಾಮ ಸಮಿತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

- Advertisement -

ಧರ್ಮಗಳ ನಡುವೆ ಕೋಮು ವಿಷ ಬೀಜ ಬಿತ್ತುತ್ತಾ, ದೇಶ ವಿರೋಧಿ ಹೇಳಿಕೆ ನೀಡುತ್ತಾ ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಪ್ರಭಾಕರ ಭಟ್ ಮೇಲೆ ಇಲಾಖೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್.ಡಿ.ಪಿ.ಐ ದೂರಿನ ಜೊತೆ ಪ್ರಭಾಕರ ಭಟ್ ಮಾಡಿದ ರಾಷ್ಟ್ರದ್ರೋಹಿ ಭಾಷಣದ ವಿಡಿಯೋ ಸಿಡಿಯನ್ನು ಸಲ್ಲಿಸಿದೆ.

- Advertisement -

ನಿಯೋಗದಲ್ಲಿ ಎಸ್.ಡಿ.ಪಿ.ಐ ಉಳ್ಳಾಲ ಕ್ಷೇತ್ರ ಸಮಿತಿ ಸದಸ್ಯ ಸುಹೈಲ್ ಉಳ್ಳಾಲ್, ಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷರಾದ ಝುಬೈರ್, ಕಾರ್ಯದರ್ಶಿ ಮುನೀರ್, ಸದಸ್ಯರಾದ ರಹಿಮಾನ್,ಫಾರೂಕ್, ಜಬ್ಬಾರ್ ಸಂತೋಷ್ ನಗರ ಉಪಸ್ಥಿತರಿದ್ದರು.



Join Whatsapp