ಕೋವಿಡ್ ನಿಯಂತ್ರಣ ನಿಯಮ ಉಲ್ಲಂಘಿಸಿದಕ್ಕಾಗಿ ಕೇರಳದಲ್ಲಿ ವಿಧಿಸಲಾದ ಒಟ್ಟು ದಂಡವೆಷ್ಟು ಗೊತ್ತೇ?

Prasthutha|

ಕೇರಳ: ಕೊವಿಡ್ 19 ಮಾರ್ಗಸೂಚಿ ಉಲ್ಲಂಘನೆ ಮಾಡಿದವರಿಗೆ ಕೇರಳದಲ್ಲಿ ಕಳೆದ ಎರಡು ವರ್ಷದಲ್ಲಿ ವಿಧಿಸಿದ ದಂಡದ ಮೊತ್ತ ಬರೋಬ್ಬರಿ 350 ಕೋಟಿ ರೂಪಾಯಿ. ಈ ದಂಡದ ಪೈಕಿ 214 ಕೋಟಿ ರೂಪಾಯಿ ಮಾಸ್ಕ್ ಧರಿಸದೆ ಇರುವುದಕ್ಕೆ ವಿಧಿಸಲಾಗಿದೆ ಎಂದು ಸರ್ಕಾರಿ ಡಾಟಾದಲ್ಲಿ ಉಲ್ಲೇಖಿಸಲಾಗಿದೆ.

- Advertisement -

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಸಾಂಕ್ರಾಮಿಕ ಪ್ರಾರಂಭವಾದ ನಂತರ ನಿಯಂತ್ರಣ ಮಾಡಲು ಕೇಂದ್ರ ವಿವಿಧ ನಿರ್ಬಂಧಗಳನ್ನು ವಿಧಿಸಿದ್ದವು. ನಿರ್ಬಂಧ ಮೀರಿದರೆ ದಂಡದ ಎಚ್ಚರಿಕೆಯನ್ನೂ ನೀಡಿತ್ತು. ಅದಾಗ್ಯೂ ಕೊರೊನಾ ನಿಯಂತ್ರಣ ನಿಯಮಗಳ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದು ದಂಡ ಕೊಟ್ಟಿದ್ದಾರೆ.

ಚೀನಾದಿಂದ ಕೇರಳಕ್ಕೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಕೊರೊನಾ ದೃಢಪಟ್ಟಿತ್ತು. ಇದು ದೇಶದಲ್ಲಿ ಪತ್ತೆಯಾಗಿದ್ದ ಮೊದಲ ಕೊರೋನಾ ಪ್ರಕರಣವಾಗಿತ್ತು.




Join Whatsapp