ಮಂಗಳೂರು: ಸರಕಾರಿ ಜಮೀನಿನಲ್ಲಿ ಖಾಸಗಿ ಬಿಲ್ಡರ್ ದರ್ಬಾರ್ | ಅಕ್ರಮ ಮನೆ ನಿರ್ಮಿಸಿದ ವ್ಯಕ್ತಿ ವಿರುದ್ಧ ಎಫ್ಐಆರ್

Prasthutha|

ಕಡಲ್ಕೊರೆತ ಹಾನಿ ಸಂತ್ರಸ್ತರಿಗೆ ಕಾಯ್ದಿರಿಸಿದ್ದ ನಿವೇಶನ

- Advertisement -

ಮಂಗಳೂರು: ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾದ ಸಂತ್ರಸ್ತರಿಗಾಗಿ ಕಾಯ್ದಿರಿಸಿದ್ದ ನಿವೇಶನದಲ್ಲಿ ಖಾಸಗಿ ಬಿಲ್ಡರ್ ಓರ್ವ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಆತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ರಾಯಪ್ಪ ಅವರು ನೀಡಿದ ದೂರಿನಡಿ ಬಿಲ್ಡರ್ ಶರತ್ ರಾಜ್ ವಿರುದ್ಧ ಪ್ರಕರಣದ ದಾಖಲಿಸಲಾಗಿದೆ. ಐಪಿಸಿ 447 (ಅತಿಕ್ರಮಣ ಪ್ರವೇಶ) ಹಾಗೂ ಕರ್ನಾಟಕ ಭೂ ಕಂದಾಯ ಕಾಯಿದೆಯ 192ಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

- Advertisement -

ಕಡಲ್ಕೊರೆತದಿಂದ ಹಾನಿಗೊಳಗಾದ ಸಂತ್ರಸ್ತರಿಗಾಗಿ ಕಾಯ್ದಿರಿಸಿದ್ದ ಕೋಟೆಕಾರು ಗ್ರಾಮದ ಮಡ್ಯಾರು ಸಾಯಿ ನಗರದಲ್ಲಿರುವ ಸರಕಾರಿ ನಿವೇಶನದಲ್ಲಿ ಬಿಲ್ಡರ್ ಶರತ್ ರಾಜ್ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದನು. ಈ ಹಿಂದೆಯೇ ಸರಕಾರಿ ಜಮೀನು ಅತಿಕ್ರಮಣ ಸಂಬಂಧ ನಗರಸಭೆ ಮುಖ್ಯಾಧಿಕಾರಿ ಎಚ್ಚರಿಕೆ ನೀಡಿದ್ದರೂ ಅಕ್ರಮ ಮುಂದುವರೆದಿತ್ತು ಎಂದು ದೂರುದಾರರು ತಿಳಿಸಿದ್ದಾರೆ.

ಈಗಾಗಲೇ ಕೆಲವು ಮನೆಗಳನ್ನು ನಿನ್ನೆ ಬೆಳಿಗ್ಗೆಯೇ ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸಿದ್ದಾಗಿ ತಿಳಿದು ಬಂದಿದೆ.

ಅಕ್ರಮ ಮನೆಗಳ ನಿರ್ಮಾಣದ ಹಿಂದೆ ಉಳ್ಳಾಲ ನಗರಸಭೆ, ಕೋಟೆಕಾರು ಪಟ್ಟಣ ಪಂಚಾಯತ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ವರ್ಗ ಶಾಮೀಲಾಗಿರುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.




Join Whatsapp