ನಾಳೆಯಿಂದ ಮೂರು ದಿನಗಳ ಕಾರ್ನಾಡು ರಿಫಾಯಿಯ್ಯ ದಫ್ ರಾತೀಬ್ ಕಾರ್ಯಕ್ರಮ ಆರಂಭ

Prasthutha|

ಮುಲ್ಕಿ : ನಾಳೆಯಿಂದ(ಮಾ. 25ರಿಂದ) ಮೂರು ದಿನಗಳ ಕಾಲ(ಮಾ.27ರವರೆಗೆ) ಕಾರ್ನಾಡು ಝಿಂದಾ ಮದರ್ ಶಾ ವಲಿಯುಲ್ಲಾ ದರ್ಗಾ ಶರೀಫ್ ನ ವಠಾರದಲ್ಲಿ ಹಿಮಾಯತುಲ್ ಇಸ್ಲಾಂ ಸಮಿತಿ (ರಿ) ಇದರ 45ನೇ ವಾರ್ಷಿಕೋತ್ಸವ ಮತ್ತು ದಫ್ ರಾತೀಬ್ ಕಾರ್ಯಕ್ರಮವು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷರಾದ ಹಾಜಿ ಕೆ.ಏ.ಇಬ್ರಾಹಿಂ ತಿಳಿಸಿದ್ದಾರೆ.

- Advertisement -

ಮಾ.25ರಂದು ಮಸ್ಜಿದುನ್ನೂರ್ ಕಾರ್ನಾಡುವಿನ ಖತೀಬರಾದ ಅಲ್ಹಾಜ್‌ ಇಸ್ಮಾಯಿಲ್ ದಾರಿಮಿ ಕಾರ್ಯಕ್ರಮದ ಉದ್ಘಾಟಿಸಲಿದ್ದು,
ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬ್ ಹಾಜಿ. ಎಸ್ .ಬಿ . ಮುಹಮ್ಮದ್ ದಾರಿಮಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಶಾಫಿ ಜುಮಾ‌ ಮಸೀದಿಯ ಅಧ್ಯಕ್ಷ ಲಿಯಾಕತ್ ಅಲಿ ವಹಿಸಲಿದ್ದಾರೆ.

- Advertisement -

ಕಾರ್ಯಕ್ರಮದ ಎರಡನೇ ದಿನದಂದು (ಮಾ. 26) ಬದ್ರಿಯಾ ಜುಮಾ ಮಸೀದಿ ಕೋಡಿ ಉಳ್ಳಾಲದ ಖತೀಬ್‌ ಹಾಜಿ ಆದಂ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದು. ಶಾಫಿ ಜುಮಾ ಮಸೀದಿಯ ಕಾರ್ಯದರ್ಶಿ ಹಾಜಿ ಫಾರೂಕ್ ಕಾರ್ನಾಡ್ ಉಪಸ್ಥಿತರಿರಲಿದ್ದಾರೆ. ಸಮಾರೋಪ ಸಮಾರಂಭದಂದು(ಮಾ.27) ಅಲ್ಹಾಜ್ ಮುಹಮ್ಮದ್ ಅವರ ನೇತೃತ್ವದಲ್ಲಿ ರಾತೀಬ್ ನೆರವೇರಲಿದೆ. ಮಗ್ರಿಬ್ ನಮಾಝಿನ ಬಳಿಕ ಮುಹಮ್ಮದ್ ಬಶೀರ್ ದಪ್ಪು ಉಸ್ತಾದ್ ಕಾಪು ನೇತೃತ್ವದಲ್ಲಿ ಸಂದಲ್ ಮೆರವಣಿಗೆ ನಡೆಯಲಿದೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು‌ ಸಂಯುಕ್ತ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದಾರೆ. ವೇದಿಕೆಯಲ್ಲಿ ಇಸ್ಮಾಯಿಲ್ ದಾರಿಮಿ, ಬಿ. ಎಂ. ಲಿಯಾಕತ್ ಅಲಿ, ಇನಾಯತ್ ಆಲಿ ಮುಲ್ಕಿ, ಅಫ್ಝಲ್ ಅಹ್ಮದ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, SDPI ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಜೆಡಿಎಸ್ ನಾಯಕ ಇಕ್ಬಾಲ್ ಅಹ್ಮದ್ ಇನ್ನಿತರರು ಭಾಗವಹಿಸಲಿದ್ದಾರೆ. ರಾತ್ರಿ 11 ಗಂಟೆಯ ನಂತರ ಅನ್ನದಾನ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Join Whatsapp