ಜೇಮ್ಸ್ ಚಿತ್ರ ಎತ್ತಂಗಡಿ: ಅಪ್ಪು ಅಭಿಮಾನಿಗಳು, ಕರವೇ ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆ

Prasthutha|

►ಆರ್ ಆರ್ ಆರ್ ಚಿತ್ರದ ಪೋಸ್ಟರ್ ಹರಿದು ಹಾಕಿ ಆಕ್ರೋಶ

- Advertisement -

ಬೆಂಗಳೂರು: ದಿ.ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಪರಭಾಷಾ ಸಿನಿಮಾಗಳಿಗಾಗಿ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ತೆಗೆಯುತ್ತಿರುವ ಧೋರಣೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಗಾಂಧಿ ನಗರದಲ್ಲಿರುವ ತ್ರಿವೇಣಿ ಥಿಯೇಟರ್ ಎದುರು ಪ್ರತಿಭಟನೆ ನಡೆಸಿದರು.

- Advertisement -

ತ್ರಿವೇಣಿ ಥಿಯೇಟರ್ ಎದುರು  ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಬಳಗದ ವತಿಯಿಂದ ಪ್ರತಿಭಟನೆ ನಡೆಸಿದ್ದು ಪರಭಾಷೆ ಸಿನಿಮಾಗಾಗಿ ಕನ್ನಡ ಸಿನಿಮಾ ತೆಗೆಯಬಾರದು ಎಂದು ಪ್ರವೀಣ್ ಶೆಟ್ಟಿ ಆಗ್ರಹಿಸಿದರು.

 ಆರ್ ಆರ್ ಆರ್ ಸಿನಿಮಾ ಹಾಕಿದ ಹಿನ್ನೆಲೆ ಬೆಂಗಳೂರಿನ ಅನುಪಮಾ ಚಿತ್ರಮಂದಿರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕನ್ನಡಪರ ಸಂಘಟನೆ ಕಾರ್ಯಕರ್ತರು, ಆರ್ ಆರ್ ಆರ್ ಚಿತ್ರದ ಪೋಸ್ಟರ್ ಗಳನ್ನು ಹರಿದು ಹಾಕಿ ಪ್ರತಿಭಟನೆ ನಡೆಸಿದರು. ಈ ಮಧ್ಯೆ ಫಿಲಂ ಚೇಂಬರ್ ಬಳಿಯೂ ಕರವೇ ಪ್ರತಿಭಟನೆ ನಡೆಸಿದ್ದು,  ಯಾವುದೇ ಕಾರಣಕ್ಕೂ ಜೇಮ್ಸ್ ತೆಗೆದು ಆರ್ ಆರ್ ಆರ್ ಗೆ ಅವಕಾಶ ಕೊಡಬಾರದು ಆಗ್ರಹಿಸಿದರು.

ನಾಳೆ ಬಿಡುಗಡೆಯಾಗಲಿರುವ ಆರ್.ಆರ್.ಆರ್ ಸಿನಿಮಾಗಾಗಿ ನೂರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಜೇಮ್ಸ್ ಚಿತ್ರ ಎತ್ತಂಗಡಿ ಮಾಡುವುದು ಸರಿಯಲ್ಲ. ಈ ಸಂಬಂಧ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

 ಕನ್ನಡಿಗರ ಆರಾಧ್ಯ ದೈವ ಪುನೀತ್ ರಾಜ್ಕುಮಾರ್ ಅಭಿನಯದ ಕೊನೆ ಚಿತ್ರ ಜೇಮ್ಸ್ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಪರ ಭಾಷಾ ಚಿತ್ರಕ್ಕಾಗಿ ಅದನ್ನು ಎತ್ತಂಗಡಿ ಮಾಡುವ ಧೋರಣೆ ಸರಿಯಿಲ್ಲ. ಬೇರೆ ಚಿತ್ರಗಳಿಗೆ ಅವಕಾಶ ಕೊಟ್ಟರೆ ಕನ್ನಡ ಚಿತ್ರಗಳ ಗತಿಯೇನು? ಎಂದು ಪ್ರಶ್ನಿಸಿದರು.



Join Whatsapp