ಕಾಲದ ವಿಕೋಪಗಳಿಂದ ಯಾರೂ ಪಾಠವನ್ನು ಕಲಿತಿಲ್ಲ: ಜಾತ್ರೆಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧದ ಬಗ್ಗೆ ಎಚ್ ಸಿ ಮಹದೇವಪ್ಪ ಪ್ರತಿಕ್ರಿಯೆ

Prasthutha|

ಬೆಂಗಳೂರು: ರಾಜ್ಯದಲ್ಲಿ ಚರ್ಚೆಗೀಡಾಗಿರುವ ಹಿಂದೂಯೇತರರಿಗೆ ಜಾತ್ರೆಗಳ ವ್ಯಾಪಾರದಲ್ಲಿ ಅವಕಾಶವಿಲ್ಲ ಎನ್ನುವ ಆದೇಶದ ಬಗ್ಗೆ ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕಾಲದ ವಿಕೋಪಗಳಿಂದ ಯಾರೂ ಪಾಠವನ್ನು ಕಲಿತಿಲ್ಲ ಎನ್ನಿಸುತ್ತದೆ ಎಂದು ಹೇಳಿದ್ದಾರೆ.

- Advertisement -

ಭಾವೈಕ್ಯತೆಯ ಗೂಡಾಗಿರುವ ಜಾತ್ರೆ, ಹಬ್ಬ ಆಚರಣೆಗಳಲ್ಲಿ ಧರ್ಮಾಧಾರಿತ ದ್ವೇಷ ಮೂಡಿಸುವ ದುಷ್ಟ ಶಕ್ತಿಗಳನ್ನು ಅರಿಯಬೇಕು.ಇಲ್ಲದೇ ಹೋದರೆ ಬದುಕು ನಡೆಸಲೂ ಕೂಡಾ ಕಠಿಣವಾದಂತಹ ದಿನಗಳು ನಮಗೆ ಎದುರಾಗಲಿವೆ ಚುನಾವಣಾ ಸಂದರ್ಭದ ಹುಚ್ಚಾಟಗಳ ಬಗ್ಗೆ ಎಚ್ಚರ ವಹಿಸುವುದು ಬೆಲೆ ಏರಿಕೆಯ ವಿರುದ್ಧ ಹೋರಾಟ ನಡೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದ್ದಾರೆ.

ಸೂಫಿಗಳು, ಸಾಧು ಸಂತರು ಶರಣರು ಹುಟ್ಟಿದ ಈ ನಾಡಿನಲ್ಲಿ ಧಾರ್ಮಿಕ ಐಕ್ಯತೆ ಮತ್ತು ಸಾಮಾಜಿಕ ಸಾಮರಸ್ಯದ ವಾತಾವರಣವು ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಗುಡಿ ಮತ್ತು ದರ್ಗಾಗಳು ಒಂದೆಡೆ ಇರುವ ಎಷ್ಟೋ ಸ್ಥಳಗಳು ಕರಾವಳಿಯಲ್ಲೂ ಇದೆ, ಉತ್ತರ ಕರ್ನಾಟಕದಲ್ಲಿ ಇನ್ನೂ ಜಾಸ್ತಿ ಇದೆ ಎಂದು ಮಹದೇವಪ್ಪ ಹೇಳಿದ್ದಾರೆ.

- Advertisement -

ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಮಾಜದ ಎಲ್ಲಾ ಧರ್ಮ ಜಾತಿಯ ಜನಾಂಗದವರೂ ಮನೆಯಿಂದ ಹೊರಗೆ ಬರಲಾರದೇ ಸರ್ಕಾರದ ಸೂಕ್ತ ನೆರವಿಲ್ಲದೇ ಎಷ್ಟು ಹೊತ್ತಿಗೆ ಲಾಕ್ ಡೌನ್ ಮುಗಿಯುತ್ತದೆ ಎನ್ನುವ ಚಿಂತೆಯಲ್ಲಿದ್ದರು. ನಾವು ಯಾವಾಗ ದುಡಿದು ಸಹಜ ಬದುಕಿಗೆ ಮರಳುತ್ತೇವೆಯೋ ಎನ್ನುತ್ತಿದ್ದರು, ಇನ್ನು ಆನ್ ಲೈನ್ ತರಗತಿಯಿಂದಲೂ ಮಕ್ಕಳಿಗೆ ತೀವ್ರ ತೊಂದರೆಯಾಗಿತ್ತು ಎಂದು ಬರೆದಿದ್ದಾರೆ.

Join Whatsapp