ಚಿಕ್ಕಮಗಳೂರು: ಕರಾವಳಿಯ ಬೆನ್ನಲ್ಲೇ, ಮಲೆನಾಡಿನಲ್ಲೂ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ ಹೇರಲು ಆಗ್ರಹ

Prasthutha|

ಚಿಕ್ಕಮಗಳೂರು: ಕರಾವಳಿಯ ಹಲವು ದೇವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳ ಮೇಲಿನ ನಿಷೇಧದ ಬೆನ್ನಲ್ಲೇ, ಮಲೆನಾಡಿನಲ್ಲೂ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -

ಶೃಂಗೇರಿ ತಾಲೂಕಿನ ಚಿತ್ರವಳ್ಳಿ ಜಾತ್ರೆಯಲ್ಲಿ ಮುಸ್ಲಿಮ್ ಸೇರಿದಂತೆ ಅನ್ಯ ಧರ್ಮೀಯ ವ್ಯಾಪಾರಿಗಳಿಗೆ ನಿಷೇಧ ಹೇರುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಎಲ್ಲಾ ಧಾರ್ಮಿಕ ಕೇಂದ್ರದ ಜಾತ್ರೆಗಳಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿಯಂತೆ ಕ್ರಮ ಜರುಗಿಸುವಂತೆ ಸ್ಥಳೀಯರು ಗ್ರಾಮಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.




Join Whatsapp