ಸಾರ್ವಜನಿಕ ಶೌಚಾಲಯದಲ್ಲೇ ಮಹಿಳೆಯ ಮೇಲೆ ಅತ್ಯಾಚಾರ !

Prasthutha|

ಲಕ್ನೋ: ಪ್ರತಾಪ್ಗೆಢ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ನ ಸಾರ್ವಜನಿಕ ಶೌಚಾಲಯದೊಳಗೆ 20 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಮಹಿಳೆ ರೈಲಿಗಾಗಿ ತನ್ನ ಪತಿಯೊಂದಿಗೆ ಕಾಯುತ್ತಿದ್ದರು ಎಂದು ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಮಾಹಿತಿ ನೀಡಿದ್ದಾರೆ.

- Advertisement -

ರೈಲಿಗಾಗಿ ಕಾಯುತ್ತಿದ್ದ ವೇಳೆ ಚಹಾ ತರಲು ಪತಿ ಹತ್ತಿರದ ಹೋಟೆಲ್ ತೆರಳಿದ್ದಾನೆ, ಇದೇ ವೇಳೆ ಆರೋಪಿ ಪಾರ್ಕಿಂಗ್ ಬಳಿ ಇರುವ ಸ್ವಚ್ಛ ಶೌಚಾಲಯ ಬಳಸುವಂತೆ ಮಹಿಳೆಗೆ ಕೀಲಿಯನ್ನು ನೀಡಿದ್ದಾನೆ. ಮಹಿಳೆ ಶೌಚಾಲಯ ಪ್ರವೇಶಿದ ಬೆನ್ನಲ್ಲೇ ಆರೋಪಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಘಟನೆ ನಡೆದ ಕೆಲ ಸಮಯದಲ್ಲೇ ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳೆ ನೀಡಿದ ದೂರಿನ ಆಧಾರ ಆರೋಪಿ ವಿರುದ್ಧ ಪೊಲೀಸರು (ಐಪಿಸಿ ಸೆಕ್ಷನ್ 376) ಅತ್ಯಾಚಾರ ಆರೋಪದಡಿ ಎಫ್ಐ ಆರ್ ದಾಖಲಿಸಿದ್ದಾರೆ.




Join Whatsapp